ದೇಶ

ಎಚ್ಐವಿ ಪೀಡಿತ ವ್ಯಕ್ತಿಗೆ ಕೊರೋನಾ ವೈರಸ್, ಆರೇ ದಿನದಲ್ಲಿ ಗುಣಮುಖ!

Lingaraj Badiger

ಲಖನೌ: ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದ ಎಚ್ಐವಿ ಪೀಡಿತ ವ್ಯಕ್ತಿಯೊಬ್ಬರು ಮಹಾಮಾರಿಯಿಂದ ಆರೇ ದಿನದಲ್ಲಿ ಗುಣಮುಖರಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕೊರೋನಾ ವೈರಸ್ ಸೋಂಕಿತ 34 ವರ್ಷದ ಎಚ್ಐವಿ ಪೀಡಿತ ವ್ಯಕ್ತಿಗೆ ಲಖನೌನ ಕಿಂಗ್ ಜಾರ್ಜ್ ವೈದ್ಯಕೀಯ ವಿವಿ(ಕೆಜೆಎಂಯು)ಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಅವರು ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ.

ಈ ವ್ಯಕ್ತಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರಿಂದ ಕೆಜೆಎಂಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ರೋಗಿ ತನಗೆ ಎಚ್ಐವಿ ಪಾಸಿಟಿವ್ ಇರುವುದನ್ನು ತಿಳಿಸಿದ್ದಾರೆ. ಬಳಿಕ ಕೊರೋನಾ ವೈರಸ್ ಪಾಸಿಟಿವ್ ಬಂದಿದೆ.

ಎಚ್‌ಐವಿ ಮತ್ತು ಕೊರೋನಾ ಪಾಸಿಟಿವ್ ಎರಡೂ ಇರುವ ಮೊದಲ ಪ್ರಕರ ಇದಾಗಿದೆ.  ಎಚ್‌ಐವಿ ರೋಗಿಗಳಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಆದರೂ ಅವರು ಕೇವಲ ಆರು ದಿನಗಳಲ್ಲಿ ಚೇತರಿಸಿಕೊಂಡಿರುವುದು ವೈದ್ಯರ ಮನೋಸ್ಥೈರ್ಯವನ್ನು ಹೆಚ್ಚಿಸಿದೆ ಎಂದು ಕೆಜಿಎಂಯು ಕುಲಪತಿ, ಪ್ರೊಫೆಸರ್ ಎಂ.ಎಲ್.ಬಿ. ಭಟ್ ಅವರು ಹೇಳಿದ್ದಾರೆ. 

ಅಪಘಾತದಲ್ಲಿ ಈ ರೋಗಿಯ ತಲೆಗೆ ಗಾಯವಾಗಿದೆ ಮತ್ತು ಗಾಯದಿಂದಾಗಿ ಸ್ವಲ್ಪ ಸಮಯ ಮಾನಸಿಕವಾಗಿ ಕುಗ್ಗಿಹೋಗಿದ್ದರು. ಆದರೆ ಈಗ ಅವರು ಕೊವಿಡ್-19 ನಿಂದ ಚೇತರಿಸಿಕೊಂಡಿದ್ದು, ಮಂಗಳವಾರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಮತ್ತು 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿಲಾಗಿದೆ ಎಂದು ಭಟ್ ತಿಳಿಸಿದ್ದಾರೆ.

SCROLL FOR NEXT