ದೇಶ

ಕೋವಿಡ್-19 ನಮ್ಮನ್ನು ಹೊಸ ಜಗತ್ತಿಗೆ ತೆರೆದುಕೊಳ್ಳಲಿದೆ: ರಾಹುಲ್ ಗಾಂಧಿ

Sumana Upadhyaya

ನವದೆಹಲಿ: ಕೊರೋನಾ ವೈರಸ್ ನಂತರ ಹೊಸ ಜಗತ್ತಿಗೆ ನಾವು ತೆರೆದುಕೊಳ್ಳಲಿದ್ದು ಚೀನಾ ಮತ್ತು ಅಮೆರಿಕ ನಡುವಿನ ಅಧಿಕಾರದ ಸಮತೋಲನವು ಕೊರೋನಾ ನಂತರ ಬದಲಾಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಹಾರ್ವರ್ಡ್ ಗ್ಲೋಬಲ್ ಆರೋಗ್ಯ ಸಂಸ್ಥೆಯ ನಿರ್ದೇಶಕ ಆಶಿಶ್ ಜಾ ಅವರೊಂದಿಗೆ ನಡೆಸಿದ ಸಂವಾದ ಸಂದರ್ಭದಲ್ಲಿ ರಾಹುಲ್ ಗಾಂಧಿ ಈ ಮಾತನ್ನು ಹೇಳಿದ್ದು ಕೊರೋನಾ ವೈರಸ್ ಎರಡು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಆರೋಗ್ಯ ಮತ್ತು ಜಾಗತಿಕ ರಚನೆ ಮೇಲೆ ದಾಳಿ ಉಂಟುಮಾಡುತ್ತಿದೆ.

ಜಾಗತೀಕರಣದ ಕೇಂದ್ರಗಳು ಕೋವಿಡ್-19ನ ದುರ್ಬಲ ಸ್ಥಳಗಳಾಗಿವೆ. ಈ ವೈರಸ್ ನಿಂದಾಗಿ ನಾವು ಹೊಸ ಜಗತ್ತಿಗೆ ತೆರೆದುಕೊಳ್ಳುತ್ತಿದ್ದೇವೆ. ಇದು ಚೀನಾ ಮತ್ತು ಅಮೆರಿಕ ನಡುವಿನ ಶಕ್ತಿಯ ಸಮತೋಲನವನ್ನು ಬದಲಾಯಿಸುವ ಜೊತೆಗೆ ಯುರೋಪ್ ಖಂಡವನ್ನು ಮರುರೂಪಿಸಲಿದೆ. ಅಮೆರಿಕಕ್ಕೆ 9/11ರ ದಾಳಿ ಹೇಗೆ ಹೊಸ ಅಧ್ಯಾಯವಾಗಿತ್ತೋ ಅದೇ ರೀತಿ ಕೋವಿಡ್-19 ಹೊಸ ಪುಸ್ತಕವಾಗಲಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ವರ್ಷದ ಹೊತ್ತಿಗೆ ಲಸಿಕೆ: ಇದೇ ಸಂದರ್ಭದಲ್ಲಿ ಜಾ ಅವರು, ಅಮೆರಿಕ, ಚೀನಾ ಮತ್ತು ಆಕ್ಸ್ ಫರ್ಡ್ ನ ಮೂರು ಲಸಿಕೆಗಳು ಕೊರೋನಾ ವಿರುದ್ಧ ಭರವಸೆಯ ಫಲಿತಾಂಶವನ್ನು ನೀಡಿದ್ದು ಮುಂದಿನ ವರ್ಷದ ಹೊತ್ತಿಗೆ ಕೋವಿಡ್-19ಗೆ ಲಸಿಕೆ ಕಂಡುಹಿಡಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಭಾರತದ ಜನಸಂಖ್ಯೆಗೆ ತಕ್ಕಂತೆ ಲಸಿಕೆಯನ್ನು ಪಡೆಯುವ ಬಗ್ಗೆ ಭಾರತ ಯೋಜನೆಯನ್ನು ಸಿದ್ದಪಡಿಸಬೇಕು ಎಂದು ಜಾ ಸಂವಾದದ ವೇಳೆ ಹೇಳಿದ್ದಾರೆ.

SCROLL FOR NEXT