ದೇಶ

ಅರುಣಾಚಲ ಪ್ರದೇಶದಲ್ಲಿ ಭದ್ರತಾ ಪಡೆಗಳಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶ

Lingaraj Badiger

ಇಟಾನಗರ: ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯ ಮಿಯಾವೊ ಬಮ್ ರಕ್ಷಿತಾರಣ್ಯದಲ್ಲಿ ಭದ್ರತಾ ಪಡೆಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ ಎಂದು ರಕ್ಷಣಾ ವಕ್ತಾರರು ಗುರುವಾರ ತಿಳಿಸಿದ್ದಾರೆ.

ಎನ್‌ಎಸ್‌ಸಿಎನ್ (ಐಎಂ) ಉಗ್ರರು ಅಡಗಿರುವ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಆಧರಿಸಿ ಅರುಣಾಚಲ ಪ್ರದೇಶ ಪೊಲೀಸರೊಂದಿಗೆ ಭಾರತೀಯ ಸೇನಾ ಪಡೆಗಳು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದ್ದವು ಎಂದು ಲೆಫ್ಟಿನೆಂಟ್ ಕರ್ನಲ್ ಪಿ ಖೊಂಗ್ಸೈ ಹೇಳಿದ್ದಾರೆ.

ಬುಧವಾರ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಪೈಕಿ ಎಕೆ-47 ರೈಫಲ್‍ ಮತ್ತು ಮೂರು ಮ್ಯಾಗಜೀನ್‍ಗಳು ಮತ್ತು 115 ಜೀವಂತ ಮದ್ದುಗುಂಡುಗಳು, ಒಂದು 22 ಪಿಸ್ತೂಲ್ ಮತ್ತು ಒಂದು ಅಂಡರ್ ಬ್ಯಾರೆಲ್ ಗ್ರೆನೇಡ್ ರಾಕೆಟ್, ಒಂದು ಕೈ ಗ್ರೆನೇಡ್, ಒಂದು ಕೆ.ಜಿ ಸ್ಫೋಟಕ ಸೇರಿವೆ ಎಂದು ಅವರು ಹೇಳಿದ್ದಾರೆ.

ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ಹೆಚ್ಚಿನ ತನಿಖೆಗಾಗಿ ಚಾಂಗ್ಲಾಂಗ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

SCROLL FOR NEXT