ದೇಶ

ಮುಂಬೈ ನ ಶೇ.99 ರಷ್ಟು ಐಸಿಯು ಬೆಡ್ ಗಳು ಭರ್ತಿ!

Srinivas Rao BV

ಮುಂಬೈ: ಮುಂಬೈ ನಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮುಂಬೈ ನಲ್ಲಿರುವ ಐಸಿಯು ಬೆಡ್ ಗಳ ಪೈಕಿ ಶೇ.99 ರಷ್ಟು ಭರ್ತಿಯಾಗಿವೆ. 

ಬೃಹತ್ ಮುಂಬೈ ಪಾಲಿಕೆ ನೀಡಿರುವ ಅಂಕಿ-ಅಂಶಗಳ ಪ್ರಕಾರ ಮೇ.27 ವರೆಗೆ 645 ಐಸಿಯು ಬೆಡ್ ಗಳ ಪೈಕಿ ಶೇ.99 ರಷ್ಟು ಭರ್ತಿಯಾಗಿದ್ದರೆ, ಆಕ್ಸಿಜನ್ ಸಪೋರ್ಟ್ ಇರುವ 4,292 ಹಾಸಿಗೆಗಳ ಪೈಕಿ ಶೇ.65 ರಷ್ಟು ಭರ್ತಿಯಾಗಿವೆ.

ಇನ್ನು 373 ವೆಂಟಿಲೇಟರ್ ಗಳ ಪೈಕಿ ಶೇ.72 ರಷ್ಟು ಭರ್ತಿಯಾಗಿವೆ. ಮುಂಬೈ ನಲ್ಲಿ ಗುರುವಾರ ಒಂದೇ ದಿನ 1,438 ಪ್ರಕರಣಗಳು ವರದಿಯಾಗಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 35,273ಕ್ಕೆ ಏರಿಕೆಯಾಗಿದ್ದು, ಗುರುವಾರ ಒಂದೇ ದಿನ 38 ಜನರು ಸಾವನ್ನಪ್ಪಿದ್ದಾರೆ. 

SCROLL FOR NEXT