ದೇಶ

ಟಿಕ್ ಟಾಕ್ ತಂದ ಆಪತ್ತು; ವಿಡಿಯೋ ಚಿತ್ರೀಕರಣ ವೇಳೆ ನೀರಿನಲ್ಲಿ ಮುಳುಗಿ 5 ಬಾಲಕರ ಸಾವು!

Srinivasamurthy VN

ವಾರಣಾಸಿ: ಖ್ಯಾತ ಸಾಮಾಜಿಕ ಜಾಲತಾಣ ಟಿಕ್ ಟಾಕ್ ಗಾಗಿ ವಿಡಿಯೋ ಮಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಐದು ಬಾಲಕರು ಸಾವನ್ನಪ್ಪಿರುವ ಘಟನೆ ವಾರಣಾಸಿಯಲ್ಲಿ ನಡೆದಿದೆ.

ವಾರಣಾಸಿಯ ಗಂಗಾನದಿಯಲ್ಲಿ ಐದು ಬಾಲಕರು ಟಿಕ್ ಟಾಕ್ ಮಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಒಳಗಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದು, ಹುಡುಗರು ನೀರಿನಲ್ಲಿ ಟಿಕ್ ಟಾಕ್ ಮಾಡುತ್ತಿದ್ದ ವೇಳೆ ಓರ್ವನ ಕಾಲು ಜಾರಿದ್ದು,  ನೀರಿನಲ್ಲಿ ಹೋಗಿದ್ದಾನೆ. ಆತನನ್ನು ರಕ್ಷಿಸುವ ಭರದಲ್ಲಿ ಇತರೆ ನಾಲ್ಕು ಮಂದಿ ಬಾಲಕರೂ ಕೂಡ ಮುಳುಗಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಎಸ್ಎಸ್ಪಿ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಂಜಯ್ ತ್ರಿಪಾಠಿ ಅವರು, ಬಾಲಕರು ನೀರಿನಲ್ಲಿ ಈಜಲು ಹೋಗಿ ಮುಳುಗಿದ್ದಾರೆ. ಪ್ರಸ್ತುತ ಈಜು ತಜ್ಞರಿಂದ ಬಾಲಕರ ದೇಹಗಳನ್ನು ಮೇಲೆ ತರಲಾಗಿದ್ದು, ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ  ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತರನ್ನು ತೌಸಿಫ್ (19), ಫರ್ದೀನ್ (14), ಸೈಫ್ (15), ರಿಜ್ವಾನ್ (15), ಮತ್ತು ಸಾಕಿ (14) ಎಂದು ಗುರುತಿಸಲಾಗಿದೆ. ಈ ಬಗ್ಗೆ ಅಘಾತ ವ್ಯಕ್ತಪಡಿಸಿರುವ ಸಿಎಂ ಯೋಗಿ ಆದಿತ್ಯಾನಾಥ್ ಸಂತ್ರಸ್ಥ ಕುಟುಂಬಸ್ಥರಿಗೆ ಅಗತ್ಯ ನೆರವು ನೀಡುವಂತೆ  ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

SCROLL FOR NEXT