ದೇಶ

ಗೃಹಸಚಿವಾಲಯದ ಪ್ರಮುಖ ಸಾಧನೆಗಳ ಪಟ್ಟಿಯಲ್ಲಿ 370, 35 ಎ ವಿಧಿ ರದ್ದು, ಕೊವಿಡ್- 19 ನಿರ್ವಹಣೆ!

Vishwanath S

ನವದೆಹಲಿ: ಸಂವಿಧಾನ 370 ಮತ್ತು 35 ಎ ವಿಧಿಗಳ ರದ್ದು, ಕರ್ತಾರ್‌ಪುರ್ ಸಾಹಿಬ್ ಕಾರಿಡಾರ್ ಆರಂಭ, ಭಯೋತ್ಪಾದನೆ ಮತ್ತು ಉಗ್ರವಾದ ನಿಭಾಯಿಸಿರುವುದು, ಮಹಿಳೆಯರ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳು ಹಾಗೂ ಕೋವಿಡ್ 19 ಮತ್ತು ನೈಸರ್ಗಿಕ ವಿಕೋಪಗಳ ನಿರ್ವಹಣೆಯನ್ನು ಕೇಂದ್ರ ಗೃಹ ಸಚಿವಾಲಯದ ತನ್ನ ಒಂದು ವರ್ಷದ ಪ್ರಮುಖ ಸಾಧನೆಗಳಲ್ಲಿ ಪಟ್ಟಿ ಮಾಡಿದೆ.

370 ಮತ್ತು 35 ಎ ವಿಧಿಗಳನ್ನು ರದ್ದು ಮಾಡಿರುವುದರಿಂದ  ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಇತರ ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳಿಗೆ ಸಮನಾಗಿವೆ. ಗೃಹ ಸಚಿವಾಲಯ ಶನಿವಾರ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರ (ಪುನರ್ ಸ್ಥಾಪನೆ) ಕಾಯ್ದೆ, 2019 ರಂತೆ  ಜಮ್ಮು-ಕಾಶ್ಮೀರ ರಾಜ್ಯವನ್ನು ಜಮ್ಮು-ಕಾಶ್ಮೀರ  ಮತ್ತು  ಲಡಾಕ್  ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ ಎಂದು ಅದು ಹೇಳಿದೆ.

ನರೇಂದ್ರ ಮೋದಿ 2.0 ಸರ್ಕಾರಕ್ಕೆ ಇಂದಿಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ತಮ್ಮ ಅಧಿಕಾರವಧಿಯಲ್ಲಿನ ಸಾಧನೆಗಳನ್ನು ಗುರುತಿಸಿದೆ.

SCROLL FOR NEXT