ಜ್ಯೋತಿರಾದಿತ್ಯ ಸಿಂಧಿಯಾ 
ದೇಶ

'ಕೈ ಗುರುತಿನ ಬಟನ್ ಒತ್ತಿ', ಕೊನೆ ಹಂತದ ಪ್ರಚಾರ ಭಾಷಣದ ವೇಳೆ ಬಾಯ್ತಪ್ಪಿ ಹೇಳಿದ ಜ್ಯೋತಿರಾದಿತ್ಯ ಸಿಂಧಿಯಾ

ಕರ್ನಾಟಕದ ಎರಡು ಕ್ಷೇತ್ರಗಳಂತೆ ಮಧ್ಯ ಪ್ರದೇಶದಲ್ಲಿ ಕೂಡ ಈಗ ಉಪ ಚುನಾವಣೆಯ ಅಬ್ಬರ. ನವೆಂಬರ್ 3ರಂದು ನಡೆಯುವ ಉಪ ಚುನಾವಣೆಯ ಕೊನೆಯ ಹಂತದ ಪ್ರಚಾರದ ವೇಳೆ ಬಿಜೆಪಿ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಒಂದು ಎಡವಟ್ಟು ಮಾಡಿಕೊಂಡರು. ಅಷ್ಟೇ ಸಾಕಾಗಿತ್ತು ಕಾಂಗ್ರೆಸ್ ಗೆ ಟೀಕಿಸಲು.

ಭೋಪಾಲ್: ಕರ್ನಾಟಕದ ಎರಡು ಕ್ಷೇತ್ರಗಳಂತೆ ಮಧ್ಯ ಪ್ರದೇಶದಲ್ಲಿ ಕೂಡ ಈಗ ಉಪ ಚುನಾವಣೆಯ ಅಬ್ಬರ. ನವೆಂಬರ್ 3ರಂದು ನಡೆಯುವ ಉಪ ಚುನಾವಣೆಯ ಕೊನೆಯ ಹಂತದ ಪ್ರಚಾರದ ವೇಳೆ ಬಿಜೆಪಿ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಒಂದು ಎಡವಟ್ಟು ಮಾಡಿಕೊಂಡರು. ಅಷ್ಟೇ ಸಾಕಾಗಿತ್ತು ಕಾಂಗ್ರೆಸ್ ಗೆ ಟೀಕಿಸಲು.

ಬಿಜೆಪಿ ಅಭ್ಯರ್ಥಿ ಇಮರ್ತಿ ದೇವಿಯವರ ಪರ ಗ್ವಾಲಿಯರ್ ನ ದಬ್ರಾ ಪಟ್ಟಣದಲ್ಲಿ ಪ್ರಚಾರ ನಡೆಸುತ್ತಾ ಭಾಷಣದ ಕೊನೆಗೆ ಜನರಲ್ಲಿ ನವೆಂಬರ್ 3ರ ಉಪ ಚುನಾವಣೆ ದಿನ ನಿಮ್ಮ ಮತವನ್ನು ಕೈಗೆ ಒತ್ತಿ ಎಂದು ಕೇಳಿಕೊಂಡರು.

ತಕ್ಷಣವೇ ತಮ್ಮ ತಪ್ಪನ್ನು ತಿದ್ದಿಕೊಂಡ ಸಿಂಧಿಯಾ, ನಿಮ್ಮ ಮತವನ್ನು ಕಮಲದ ಗುರುತಿಗೆ ಹಾಕಿ ಎಂದು ಕೇಳಿಕೊಂಡರು.
ಈ ವಿಡಿಯೊವನ್ನು ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಸಿಂಧಿಯಾರವರೇ, ಮಧ್ಯ ಪ್ರದೇಶದ ಜನರು ನವೆಂಬರ್ 3 ರಂದು ಕೈಯ ಗುರುತಿಗೆ ಮತ ಹಾಕುತ್ತಾರೆ ಎಂದು ನಿಮಗೆ ಖಂಡಿತಾ ಭರವಸೆ ಕೊಡುತ್ತಾರೆ ಎಂದರು.

मध्यप्रदेश में कमलनाथ जी की लहर देख अब गद्दार सिंधिया के मुंह पर भी सच्चाई आ गई..! pic.twitter.com/nnhtUlywHF

— MP Youth Congress (@IYCMadhya) October 31, 2020

ಈ ಬಗ್ಗೆ ಬಿಜೆಪಿ ವಕ್ತಾರ ಪಂಕಜ್ ಚತುರ್ವೇದಿ ಅವರನ್ನು ಸಂಪರ್ಕಿಸಿದಾಗ, ಅಂತಹ ಪ್ರಮಾದ ಯಾರಿಂದಲಾದರೂ ನಡೆಯುತ್ತದೆ. ಅದು ಬಾಯ್ತಪ್ಪಿ ಆಡಿದ ಮಾತಾಗಿದ್ದು ಅದನ್ನು ಸಿಂಧಿಯಾ ತಕ್ಷಣವೇ ಸರಿಪಡಿಸಿದ್ದಾರೆ, ಪ್ರತಿಯೊಬ್ಬರಿಗೂ ಗೊತ್ತು ಅವರು ಬಿಜೆಪಿ ನಾಯಕರು ಎಂದು ಎಂದಿದ್ದಾರೆ.

2002ರಲ್ಲಿ ಕಾಂಗ್ರೆಸ್ ಸೇರಿದ್ದ ಸಿಂಧಿಯಾ 18 ವರ್ಷಗಳ ಕಾಲ ಆ ಪಕ್ಷದಲ್ಲಿದ್ದು ಈ ವರ್ಷ ಮಾರ್ಚ್ ನಲ್ಲಿ ತೊರೆದಿದ್ದರು.
ಅವರ ಜೊತೆ ಸುಮಾರು 22 ಸಂಸದರು ಮತ್ತು ಶಾಸಕರು ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಇದರಿಂದಾಗಿ ಕಮಲ್ ನಾಥ್ ಸರ್ಕಾರ ಮುರಿದು ಬಿದ್ದು ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಅಸ್ತಿತ್ವಕ್ಕೆ ಬಂತು.

ನವೆಂಬರ್ 3ರಂದು 28 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT