ದೇಶ

ದೇಶದ ಜನತೆಗೆ ಬಿಜೆಪಿಯ ಕೊಡುಗೆ ಹಣದುಬ್ಬರ: ರಾಹುಲ್‌, ಪ್ರಿಯಾಂಕಾ ವಾದ್ರಾ ವಾಗ್ದಾಳಿ

Vishwanath S

ನವದೆಹಲಿ: ದೇಶದಲ್ಲಿ ಕಾಣಿಸಿಕೊಂಡಿರುವ ಹಣದುಬ್ಬರದ ಸಮಸ್ಯೆಗೆ ಕೇಂದ್ರ ಸರ್ಕಾರವನ್ನು ಹೊಣೆಯಾಗಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸರ್ಕಾರ ಕಾರ್ಪೊರೇಟ್ ಉದ್ಯಮಿಗಳಿಗೆ ಉತ್ತೇಜನ ನೀಡಿ, ರೈತರು ಮತ್ತು ಬಡವರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದಾರೆ.

ದೇಶದ ರೈತರು 'ಮಂಡಿಗೆ' ಮನವಿ ಮಾಡುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ, ಅವರಿಗೆ ತೀವ್ರ ಹಣದುಬ್ಬರದ ಕೊಡುಗೆ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಅವರು ಮಂಡಿಯ ಚಿತ್ರದೊಂದಿಗೆ, ಎಪಿಎಂಸಿ ಸುಧಾರಣೆಗೆ ರೈತರ ನಕಾರದ ವರದಿಗಳನ್ನು ಲಗತ್ತಿಸಿದ್ದಾರೆ.

ಪ್ರಿಯಾಂಕಾ ಗಾಂಧಿ, 'ಬಿಜೆಪಿಯಿಂದ ಜನರಿಗೆ ದೊರೆತಿರುವ ದೀಪಾವಳಿ ಉಡುಗೊರೆಯೆಂದರೆ ಅತಿಯಾದ ಹಣದುಬ್ಬರ. ಬಿಜೆಪಿಯಿಂದ ಉದ್ಯಮಿ ಸ್ನೇಹಿತರಿಗೆ ದೊರೆತಿರುವ ದೀಪಾವಳಿ ಕೊಡುಗೆಯೆಂದರೆ,  ಆರು ವಿಮಾನನಿಲ್ದಾಣಗಳು. ಇದು ಉದ್ಯಮಿಗಳೊಂದಿಗೆ ಉದ್ಯಮಿಗಳ ಅಭಿವೃದ್ಧಿ' ಎಂದು ಲೇವಡಿ ಮಾಡಿದ್ದಾರೆ.

SCROLL FOR NEXT