ದೇಶ

ಚೀನಾ ಉಪಟಳ ನಡುವೆ ಪಿನಾಕಾ ರಾಕೆಟ್ ವ್ಯವಸ್ಥೆಯ ಯಶಸ್ವಿ ಪರೀಕ್ಷೆ ನಡೆಸಿದ ಡಿಆರ್‌ಡಿಒ

Vishwanath S

ನವದೆಹಲಿ: ಡಿಆರ್‌ಡಿಒ ಒಡಿಶಾ ಕರಾವಳಿಯಲ್ಲಿ ಪಿನಾಕಾ ರಾಕೆಟ್ ವ್ಯವಸ್ಥೆಯ ಹೊಸ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.

"ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ (ಡಿಆರ್ಡಿಒ) ಅಭಿವೃದ್ಧಿಪಡಿಸಿದ ಪಿನಾಕಾ ರಾಕೆಟ್ ಸಿಸ್ಟಮ್ನ ವರ್ಧಿತ ಆವೃತ್ತಿಯನ್ನು ಇಂದು ಒಡಿಶಾ ಕರಾವಳಿಯ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಿಂದ ಯಶಸ್ವಿಯಾಗಿ ಹಾರಾಟ ಪರೀಕ್ಷಿಸಲಾಗಿದೆ ಎಂದು ಡಿಆರ್‌ಡಿಒ ಟ್ವೀಟ್ ಮಾಡಿದೆ.

ಪಿನಾಕಾ ರಾಕೆಟ್ ವ್ಯವಸ್ಥೆಯ ವರ್ಧಿತ ಆವೃತ್ತಿಯು ಪ್ರಸ್ತುತ ಉತ್ಪಾದನೆಯಲ್ಲಿರುವ ಪಿನಾಕಾ ಎಂಕೆ-ಐ ರಾಕೆಟ್‌ಗಳನ್ನು ಬದಲಾಯಿಸುತ್ತದೆ ಎಂದು ಡಿಆರ್‌ಡಿಒ ಹೇಳಿದೆ. ಪಿನಾಕಾ ರಾಕೆಟ್‌ಗಳು ಸುಮಾರು 37 ಕಿ.ಮೀ ವ್ಯಾಪ್ತಿಯನ್ನು ಹೊಂದಿವೆ.

ಕಳೆದ ಎರಡು ತಿಂಗಳುಗಳಲ್ಲಿ ಭಾರತ ಹಲವಾರು ಕ್ಷಿಪಣಿಗಳ ಪರೀಕ್ಷೆ ನಡೆಸಿದೆ. ಮೇಲ್ಮೈಯಿಂದ ಮೇಲ್ಮೈಗೆ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್ ಹಾಗೂ ಹೊಸ ಆವೃತ್ತಿಯ ರುದ್ರಂ-1 ಕ್ಷಿಪಣಿ ಸೇರಿವೆ.

SCROLL FOR NEXT