ದೇಶ

ಮಾಹಿತಿಯ ನಿರಾಕರಣೆಯನ್ನು ಸಮರ್ಥಿಸಿ; ಷರತ್ತುಗಳನ್ನು ಉಲ್ಲೇಖಿಸಬೇಡಿ: ಸಿಬಿಐಗೆ ಸಿಐಸಿ

Srinivas Rao BV

ಮಾಹಿತಿಯ ನಿರಾಕರಣೆಗೆ ಸೂಕ್ತವಾದ ಸಮರ್ಥನೆಯನ್ನು ನೀಡಿ ಕೇವಲ ಷರತ್ತುಗಳನ್ನು ಉಲ್ಲೇಖಿಸುವುದು ಸಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಸಿಬಿಐ ಗೆ ನಿರ್ದೇಶನ ನೀಡಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಮಾಹಿತಿ ತನಿಖಾ ಪ್ರಗತಿಯಲ್ಲಿ ಅಥವಾ ಪ್ರಾಸಿಕ್ಯೂಷನ್ ಯಾವ ಆಧಾರದಲ್ಲಿ ಅಡ್ಡಿಯಾಗಲಿದೆ ಎಂಬುದನ್ನು ವಿವರಿಸಬೇಕು ಕೇವಲ ಸಂಬಂಧಪಟ್ಟ ಷರತ್ತುಗಳನ್ನು ಉಲ್ಲೇಖಿಸುವುದು ಸೂಕ್ತವಲ್ಲ ಎಂದು ಸಿಬಿಐಗೆ ಸಿಐಸಿ ತಿಳಿಸಿದೆ.

ಮಾಹಿತಿ ಆಯುಕ್ತರಾದ ವನಜಾ ಎನ್ ಸರ್ನಾ ಸಿಬಿಐಗೆ ನಿರ್ದೇಶನ ನೀಡಿದ್ದು, ಆರ್ ಟಿಐ ಕಾಯ್ದೆಯ ವಿನಾಯಿತಿ ಷರತ್ತಿನ ಸೆಕ್ಷನ್ 8(1)(h) ನ್ನು ತನಿಖೆಗೆ ಯಾವ ರೀತಿಯ ಅಡಚಣೆ ಉಂಟಾಗಲಿದೆ ಎಂಬುದನ್ನು ಉಲ್ಲೇಖಿಸಬೇಕಾದರೆ ಬಲವಾದ ವಿವರಣೆಯನ್ನೂ ನೀಡಬೇಕೆಂದು ಸೂಚಿಸಿದೆ.

SCROLL FOR NEXT