ದೇಶ

ದೆಹಲಿಯಲ್ಲಿ ನ.30 ರವರೆಗೆ ಪಟಾಕಿ ಬಳಕೆ-ಮಾರಾಟಕ್ಕೆ ಎನ್ ಜಿಟಿ ನಿಷೇಧ: ಮಾಲಿನ್ಯ ಹೆಚ್ಚಿರುವ ನಗರಗಳಿಗೂ ಇದು ಅನ್ವಯ

Shilpa D

ನವದೆಹಲಿ: ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೋನ ಸೋಂಕು ಹೆಚ್ಚಳ ಮತ್ತು ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಗಮನದಲ್ಲಿಟ್ಟುಕೊಂಡು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಇಂದು ಮಧ್ಯರಾತ್ರಿಯಿಂದ ಇದೇ 30 ರವರೆಗೆ ದೆಹಲಿ-ಎನ್ಸಿಆರ್ನಲ್ಲಿ ಎಲ್ಲಾ ರೀತಿಯ ಪಟಾಕಿ ಮಾರಾಟ ಅಥವಾ ಬಳಸದಂತೆ ನಿಷೇಧಿಸಿದೆ.

ಇದರ ಜೊತೆಗೆ ಗಾಳಿಯ ಗುಣಮಟ್ಟ ಕಡಿಮೆ ಇರುವ ನಗರಗಳಲ್ಲೂ ಎಲ್ಲಾ ರೀತಿಯ ಪಟಾಕಿಗಳನ್ನು ನಿಷೇಧಿಸಲು ಆದೇಶ ಹೊರಡಿಸಲಾಗಿದೆ. ಸಂಭ್ರಮ ಸಂತೋಷಕ್ಕಾಗಿ ಪಟಾಕಿ ಹಚ್ಚಬೇಕೆ ಹೊರತು, ರೋಗ ಮತ್ತು ಸಾವನ್ನು ತರಲು ಅಲ್ಲ ಎಂದು ಅಭಿಪ್ರಾಯ ಪಟ್ಟಿರುವ ಎನ್ ಜಿಟಿ ಅಧ್ಯಕ್ಷ ಆದರ್ಶ್ ಕುಮಾರ್ ಗೋಯೆಲ್ ದೇಶದ ಎಲ್ಲಾ ನಗರ ಮತ್ತು ಪಟ್ಟಣ ಗಳಿಗೆ ಅನ್ವಯಸಲಿದ್ದು, 2019ರಲ್ಲಿ ಮಾಲಿನ್ಯ ಹೆಚ್ಚಿದ್ದ ಸೇರಿದ್ದ ನಗರಗಳಿಗೂ ಇದು ಅನ್ವಯವಾಗಲಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ನವೆಂಬರ್ 9 2020 ರ ಮಧ್ಯರಾತ್ರಿಯಿಂದ, ನವೆಂಬರ್ 30 ರಿಂದ 2020 ರ ಡಿಸೆಂಬರ್ 1 ರ ಮಧ್ಯರಾತ್ರಿಯವರೆಗೆ ಎನ್‌ಸಿಆರ್‌ನಲ್ಲಿ ಎಲ್ಲಾ ರೀತಿಯ ಪಟಾಕಿಗಳನ್ನು ಮಾರಾಟ ಮಾಡುವುದು ಅಥವಾ ಬಳಸುವುದರ ವಿರುದ್ಧ ಸಂಪೂರ್ಣ ನಿಷೇಧವಿರುತ್ತದೆ, ನಂತರ ಅದನ್ನು ಪರಿಶೀಲಿಸಲಾಗುವುದು ಎಂದು ಎನ್ ಜಿ ಟಿ ತಿಳಿಸಿದೆ.

ಗಾಳಿಯ ಗುಣಮಟ್ಟ 'ಮಧ್ಯಮ' ಅಥವಾ ಅದಕ್ಕಿಂತ ಕಡಿಮೆ ಇರುವ ನಗರಗಳು / ಪಟ್ಟಣಗಳು, ಹಸಿರು ಕ್ರ್ಯಾಕರ್‌ಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ.  ಹೊಸ ವರ್ಷ. ಕ್ರಿಸ್ ಮಸ್, ದೀಪಾವಳಿ ಹಾಗೂ ಮುಂತಾದ ಹಬ್ಬಗಳಲ್ಲಿ ಪಟಾಕಿ ಸಿಡಿಸುವ ಸಮಯ ನಿಗದಿ ಪಡಿಸಿದ್ದು ಕೇವಲ 2 ಗಂಟೆ  ಮಾತ್ರ ಅವಕಾಶ ನೀಡಲು ಸಂಬಂಧಿಸಿದತ ರಾಜ್ಯಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಇತರ ಸ್ಥಳಗಳಲ್ಲಿ, ನಿಷೇಧ ಅಥವಾ ನಿರ್ಬಂಧಿಸಲು ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. 

ಕೊರೋನಾ ಉಲ್ಬಣಗೊಳ್ಳುವ ಸಾಧ್ಯತೆಯ ದೃಷ್ಟಿಯಿಂದ ಎಲ್ಲಾ ಮೂಲಗಳಿಂದ ವಾಯುಮಾಲಿನ್ಯವನ್ನು ತಡೆಗಟ್ಟಲು ವಿಶೇಷ ಅಭಿಯಾನ ಪ್ರಾರಂಭಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎನ್‌ಜಿಟಿ ನಿರ್ದೇಶನ ನೀಡಿತು.

ಆಚರಣೆ ಸಂತೋಷ ತರಬೇಕೆ ಹೊರತು ಸಾವು ಮತ್ತು ಕಾಯಿಲೆ ತರಬಾರದು, ಭಾರತೀಯ ಸಮಾಜವು ಎಲ್ಲರ ಕ್ಷೇಮದಲ್ಲಿ ತಮ್ಮ ಸಂತೋಷವನ್ನು ಕಾಣುವಂತಾದ್ದಾಗಿದೆ ಎಂದು ನ್ಯಾಯ ಪೀಠ ಅಭಿಪ್ರಾಯ ಪಟ್ಟಿದೆ.

ಎಲ್ಲಾ ಜಿಲ್ಲಾ ನ್ಯಾಯಾಧೀಶರು, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸೂಕ್ತ ಜಾರಿ ಮಾರ್ಗಸೂಚಿಗಳೊಂದಿಗೆ ಆದೇಶಗಳನ್ನು ಹೊರಡಿಸಲು ಮತ್ತು ವಿತರಿಸಲು ಎಲ್ಲಾ ರಾಜ್ಯಗಳು ಮತ್ತು ಯುಟಿಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿಪಿಗಳಿಗೆ ನ್ಯಾಯಮಂಡಳಿ ನಿರ್ದೇಶನ ನೀಡಿತು.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ಸತತ ಮೂರನೇ ದಿನವೂ ದೆಹಲಿಯ ಹಲವಾರು ಸ್ಥಳಗಳ ವಾಯುಗುಣಮಟ್ಟ ಕುಸಿದಿದೆ. ರಾಷ್ಟ್ರೀಯ ರಾಜಧಾನ ಕ್ಷೀಣಿಸುತ್ತಿರುವ ಗಾಳಿಯ ಗುಣಮಟ್ಟದಲ್ಲಿ ಮುಂದುವರಿಯುತ್ತಿದೆ.

ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಆನಂದ್ ವಿಹಾರದಲ್ಲಿ 484, ಮುಂಡ್ಕಾದಲ್ಲಿ 470, 465 ಓಖ್ಲಾ ಹಂತ 2 ಮತ್ತು ವಾಜೀರ್ಪುರದಲ್ಲಿ 468, ಇವೆಲ್ಲವೂ ಅತಿ ಕೆಟ್ಟ ಸ್ಥಿತಿಯಲ್ಲಿದೆ.  ರಾಜಧಾನಿಯ ಕೆಲವು ಭಾಗಗಳು ದಟ್ಟ ಹೊಗೆಯಿಂದ ಕೂಡಿದ್ದು ದೆಹಲಿ-ಎನ್ಸಿಆರ್ ಪ್ರತಿ ಚಳಿಗಾಲದಲ್ಲೂ ಈ ಸಮಸ್ಯೆ ಎದುರಿಸುತ್ತದೆ. ಇದು ನೆರೆಯ ರಾಜ್ಯಗಳಾದ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಕೃಷಿ ತ್ಯಾಜ್ಯ ದಹನದಿಂದ ಉಲ್ಬಣಗೊಳ್ಳಲಿದೆ.

SCROLL FOR NEXT