ದೇಶ

ತ್ರಿವರ್ಣ ಧ್ವಜ ಮತ್ತು ಜಮ್ಮು, ಕಾಶ್ಮೀರ ಧ್ವಜ ಒಟ್ಟಿಗೆ ಹಿಡಿದುಕೊಳ್ಳುತ್ತೇನೆ: ಮೆಹಬೂಬಾ ಮುಫ್ತಿ

Lingaraj Badiger

ಜಮ್ಮು: ಜಮ್ಮು ಮತ್ತು ಕಾಶ್ಮೀರ ಸಂವಿಧಾನದ ಮೇಲಿನ ನಂಬಿಕೆ ಮತ್ತು ಭಾರತದ ಸಾರ್ವಭೌಮತ್ವ, ಸಮಗ್ರತೆಯನ್ನು ಬೇರ್ಪಡಿಸಲಾಗದು ಎಂದು ಪುನರುಚ್ಚರಿಸಿರುವ ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು, ತ್ರಿವರ್ಣ ಧ್ವಜ ಮತ್ತು ಜಮ್ಮು, ಕಾಶ್ಮೀರ ಧ್ವಜ ಒಟ್ಟಿಗೆ ಹಿಡಿದುಕೊಳ್ಳುವುದಾಗಿ ಸೋಮವಾರ ಹೇಳಿದ್ದಾರೆ.

ಸಾರ್ವಜನಿಕ ಸುರಕ್ಷತಾ ಕಾಯ್ದೆ ಅಡಿ ಸುಮಾರು ಒಂದು ವರ್ಷ ಬಂಧನದಲ್ಲಿದ್ದ ಮುಫ್ತಿ ಇತ್ತೀಚಿಗಷ್ಟೇ ಬಿಡುಗಡೆಯಾಗಿದ್ದು, ಇಂದು ಮೊದಲ ಬಾರಿಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

"ನಾವು, ವಿಶೇಷವಾಗಿ ಕಾಶ್ಮೀರ ಕಣಿವೆಯ ಜನ, ಹುತಾತ್ಮರಾದ ನಮ್ಮ ಸಾವಿರಾರು ಕಾರ್ಯಕರ್ತರ ವೆಚ್ಚದಲ್ಲಿ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದಿದ್ದೇವೆ". ಆದರೆ ಅರ್ಧ ಪ್ಯಾಂಟ್ ಧರಿಸುವವರು ಮತ್ತು ಕಚೇರಿಯಲ್ಲಿ ಕುಳಿತುಕೊಳ್ಳುವ ಅವರ ನಾಯಕರು ತ್ರಿವರ್ಣ ಧ್ವಜವನ್ನು ಹಾರಿಸುವುದಿಲ್ಲ. ಅಂತಹವರಿಂದ ರಾಷ್ಟ್ರ ಧ್ವಜದ ಬಗ್ಗೆ ಪಾಠ ಕಲಿಯುವ ಅಗತ್ಯ ಇಲ್ಲ ಎಂದು ಮುಫ್ತಿ ಪರೋಕ್ಷಗವಾಗಿ ಬಿಜೆಪಿ ಮತ್ತು ಆರ್ ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

"ಬಿಜೆಪಿ ಸದಸ್ಯರು ಸೇರಿದಂತೆ ನಾವು ಜಮ್ಮು ಮತ್ತು ಕಾಶ್ಮೀರ ಸಂವಿಧಾನ ಮತ್ತು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುತ್ತೇವೆ ಎಂದು ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇವೆ ಎಂದರು.

ಮೊದಲು ಜಮ್ಮು ಮತ್ತು ಕಾಶ್ಮೀರ ಸಂವಿಧಾನ ನಂತರ ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಯಾಗಿತ್ತು. ಆದರೆ ಅವರು ಹೇಗೆ ಒಂದು ಬೆರಳನ್ನು ಕತ್ತರಿಸಿ ಇನ್ನೊಂದನ್ನು ಬಿಡುತ್ತಾರೆ? ಅದು ಸರಿಯಲ್ಲ ಎಂದು ಮುಫ್ತಿ ಹೇಳಿದ್ದಾರೆ.

SCROLL FOR NEXT