ದೇಶ

ನಮ್ಮಲ್ಲಿ ಬಲಿಷ್ಠ ಸಶಸ್ತ್ರ ಪಡೆಗಳಿಲ್ಲದಿದ್ದರೆ ಎದುರಾಳಿ ಅದರ ಲಾಭ ಪಡೆಯಬಹುದು: ಬಿಪಿನ್ ರಾವತ್

Lingaraj Badiger

ನವದೆಹಲಿ: ಭಾರತೀಯ ಸಶಸ್ತ್ರ ಪಡೆಗಳು ಅತ್ಯಂತ ಸಂಕೀರ್ಣವಾದ ಮತ್ತು ಅನಿಶ್ಚಿತ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಅವರು ವಿವಾದಿತ ಪ್ರದೇಶದಲ್ಲಿ ಶಾಂತಿಗಾಗಿ ಸಾಮರ್ಥ್ಯಗಳನ್ನು ಹೆಚ್ಚಿಸುವುದನ್ನು ಮುಂದುವರಿಸಬೇಕು. ಏಕೆಂದರೆ ನಮ್ಮ ಮಿಲಿಟರಿ ಶಕ್ತಿ ಬಲಿಷ್ಠವಾಗಿರದಿದ್ದರೆ ಭಾರತದ ವಿರೋಧಿಗಳು ಅದರ ಲಾಭ ಪಡೆಯಬಹುದು ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಮಂಗಳವಾರ ಹೇಳಿದ್ದಾರೆ.

ರಕ್ಷಣಾ ಮತ್ತು ಮಿಲಿಟರಿ ವಿಷಯಗಳ ಕುರಿತ ಪೋರ್ಟಲ್ ಭರತ್ ಶಕ್ತಿ.ಇನ್‌ನ ಐದನೇ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ರಾವತ್ ಅವರು, ಭಾರತ ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ನೆರೆಹೊರೆಯ ಸ್ನೇಹಪರ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲು ಬಯಸುತ್ತದೆ ಎಂದಿದ್ದಾರೆ.

"ನಾವು ಇಂದು ಅತ್ಯಂತ ಸಂಕೀರ್ಣವಾದ, ಅನಿಶ್ಚಿತವಾದ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಪ್ರಪಂಚದ ಪ್ರತಿಯೊಂದು ಪ್ರದೇಶದಲ್ಲೂ ಸಣ್ಣ ಮತ್ತು ದೊಡ್ಡ ಯುದ್ಧಗಳು ನಡೆಯುತ್ತಿವೆ. ಆದ್ದರಿಂದ, ನಮ್ಮನ್ನು ರಕ್ಷಿಸಿಕೊಳ್ಳಬೇಕಾದರೆ, ನಮ್ಮ ರಾಷ್ಟ್ರವನ್ನು ರಕ್ಷಿಸಬೇಕಾದರೆ ನಮಗೆ ಬಲಿಷ್ಠವಾದ ಸಶಸ್ತ್ರ ಪಡೆಗಳ ಅಗತ್ಯವಿದೆ. ನಮ್ಮ ರಾಷ್ಟ್ರದ ಸಮಗ್ರತೆ ಮತ್ತು ನಮ್ಮ ಜನರ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸಶಸ್ತ್ರ ಪಡೆಗಳನ್ನು ಮತ್ತಷ್ಟು ಬಲಪಡಿಸಬೇಕು” ಎಂದು ಜನರಲ್ ರಾವತ್ ಹೇಳಿದ್ದಾರೆ.

ನಾವು ಹೇಳುತ್ತಿರುವುದು ಸಶಸ್ತ್ರ ಪಡೆಗಳು ಯುದ್ಧಕ್ಕೆ ಸಿದ್ಧವಾಗಬೇಕು ಎಂದಲ್ಲ. ವಿವಾದಿತ ಪ್ರದೇಶದಲ್ಲಿ ಶಾಂತಿ ನೆಲೆಸಲು ಸಶಸ್ತ್ರ ಪಡೆಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮಲ್ಲಿ ಬಲಿಷ್ಠವಾದ ಸಶಸ್ತ್ರ ಪಡೆಗಳಿಲ್ಲದಿದ್ದರೆ, ಎದುರಾಳಿಯು ಅದರ ಲಾಭವನ್ನು ಪಡೆದುಕೊಳ್ಳುತ್ತಾನೆ" ಎಂದರು.

SCROLL FOR NEXT