ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ 
ದೇಶ

ಗುಜರಾತ್ ಉಪ ಚುನಾವಣೆ: ಎಂಟೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ; ಮುಂದಿನ ಚುನಾವಣೆಯ ಟ್ರೇಲರ್ ಇದು ಎಂದ ಸಿಎಂ ವಿಜಯ್ ರೂಪಾನಿ!

ಕರ್ನಾಟಕದಂತೆಯೇ ಗುಜರಾತ್ ನಲ್ಲಿಯೂ ಉಪ ಚುನಾವಣಾ ಮತಎಣಿಕೆ ಕಾರ್ಯ ನಿರ್ಣಾಯಕ ಹಂತ ತಲುಪಿದ್ದು, ಗುಜರಾತ್ ನ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.

ಗಾಂಧಿನಗರ: ಕರ್ನಾಟಕದಂತೆಯೇ ಗುಜರಾತ್ ನಲ್ಲಿಯೂ ಉಪ ಚುನಾವಣಾ ಮತಎಣಿಕೆ ಕಾರ್ಯ ನಿರ್ಣಾಯಕ ಹಂತ ತಲುಪಿದ್ದು, ಗುಜರಾತ್ ನ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.

ಗುಜರಾತ್ ನ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ಮತಎಣಿಕೆ ನಡೆಯುತ್ತಿದ್ದು, ಎಲ್ಲ ಎಂಟೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಅಬ್ದುಸಾ, ಕರ್ಜನ್, ಮೊರ್ಬಿ, ಗಡಾಡಾ, ಧಾರಿ, ಲಿಂಬ್ಡಿ, ಕಪ್ರಡಾ ಮತ್ತು ಡ್ಯಾಂಗ್ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.  ಬೆಳಗ್ಗೆ 8 ಗಂಟೆಯಿಂದಲೇ ಮತಎಣಿಕೆ ಕಾರ್ಯ ಆರಂಭವಾಗಿದ್ದು, 8 ಕ್ಷೇತ್ರಗಳಿಂದ 81 ಅಭ್ಯರ್ಥಿಗಳು ಹಾಲಿ ಚುನಾವಣಾ ಕಣದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 

ಗೆಲುವು ನಮ್ಮದೇ, ಮುಂದಿನ ಚುನಾವಣೆಯ ಟ್ರೈಲರ್ ಇದು: ಸಿಎಂ ರೂಪಾನಿ
ಇನ್ನು ಅತ್ತ ಎಲ್ಲ 8 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ ಬೆನ್ನಲ್ಲೇ ಈ ಕುರಿತು ಗಾಂಧಿನಗರದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ವಿಜಯ್ ರೂಪಾನಿ, ಎಲ್ಲ 8 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ಸನಿಹದಲ್ಲಿದ್ದಾರೆ. ಎಲ್ಲರೂ ಜಯ ಗಳಿಸಲಿದ್ದಾರೆ ಎಂಬ ವಿಶ್ವಾಸ ತಮಗಿದೆ. ಹಾಲಿ ಉಪ  ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಯ ಟ್ರೈಲರ್ ಆಗಿದ್ದು, ಮುಂದಿನ ಚುನಾವಣೆಯಲ್ಲೂ ಬಿಜೆಪಿ ಭರ್ಜರಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವರ್ಷದ ಜೂನ್‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ನಂತರ ಗುಜರಾತ್‌ನಲ್ಲಿ ಉಪಚುನಾವಣೆ ಅಗತ್ಯವಾಗಿತ್ತು. ಈ ಪೈಕಿ ಐವರು ಶಾಸಕರು ನಂತರ ಆಡಳಿತಾರೂಢ ಬಿಜೆಪಿಗೆ ಸೇರಿದರು, ಇದೀಗ 2017 ರ ಚುನಾವಣೆಯಲ್ಲಿ ಅವರು ಗೆದ್ದ ಅದೇ  ಸ್ಥಾನಗಳಿಂದ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

ಬೆಂಗಳೂರು: 500 ರೂ.ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

SCROLL FOR NEXT