ದೇಶ

ಮಧ್ಯ ಪ್ರದೇಶ ಉಪ ಚುನಾವಣೆ: 28 ಕ್ಷೇತ್ರಗಳ ಪೈಕಿ 18ರಲ್ಲಿ ಬಿಜೆಪಿ, 9ರಲ್ಲಿ ಕಾಂಗ್ರೆಸ್ ಮುನ್ನಡೆ

Srinivasamurthy VN

ಭೋಪಾಲ್: ಬಿಜೆಪಿಯ ಶಿವರಾಜ್ ಸಿಂಗ್ ಚೌಹ್ವಾಣ್ ಸರ್ಕಾರದ ಉಳಿವಿನ ಉಪ ಚುನಾವಣೆ ಎಂದೇ ಕರೆಯಲಾಗುತ್ತಿರುವ ಮಧ್ಯ ಪ್ರದೇಶ ಉಪ ಚುನಾವಣೆಯಲ್ಲಿ ಬಿಜೆಪಿ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 9 ಕ್ಷೇತ್ರಗಳ ಪೈಕಿ ಮುನ್ನಡೆ ಸಾಧಿಸಿದೆ.

ಹೌದು.. ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ 28 ವಿಧಾನಸಭಾ ಕ್ಷೇತ್ರಗಳ ಪೈಕಿ 18 ರಲ್ಲಿ ಮುನ್ನಡೆ ಪಡೆದಿದೆ. ಕಾಂಗ್ರೆಸ್ 9 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಬಿಜೆಪಿಯ ತುಳಸಿರಾಮ್ ಸಿಲಾವತ್ ಸ್ಯಾನ್ವರ್‌ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, ರಾಜವರ್ಧನ್ ಸಿಂಗ್ ದಟ್ಟಿಗಾಂವ್ ಬದ್ನವಾರ್‌ನಲ್ಲಿ,  ಮುಂಗೋಲಿಯ ಬ್ರಜೇಂದ್ರ ಸಿಂಗ್ ಯಾದವ್, ಬಯೋರಾದ ನಾರಾಯಣ್ ಸಿಂಗ್ ಪವಾರ್, ಸುವಸಾರಾದ ಹರ್ದೀಪ್ ಸಿಂಗ್ ಡಂಗ್ ಮತ್ತು ಅಶೋಕ್ ನಗರದಿಂದ ಅಜೋಕ್ ನಗರದಿಂದ ಜಜ್ಪಾಲ್ ಸಿಂಗ್ ಜಜ್ಜಿ ತಮ್ಮ ಎದುರಾಳಿಗಳ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. 

ಅಗಾರ್ ಮತ್ತು ಹಟ್ಪಿಪಾಲ್ಯಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ ವಿಪಿನ್ ವಾಂಖೆಡೆ ಮತ್ತು ರಾಜೇಂದ್ರ ಸಿಂಗ್ ಬಘೇಲಾ ಮುನ್ನಡೆ ಸಾಧಿಸಿದ್ದಾರೆ. ಮಧ್ಯ ಪ್ರದೇಶದಲ್ಲಿ ಸರ್ಕಾರ ಉಳಿಸಿಕೊಳ್ಳಲು ಈ ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ. ಮಧ್ಯ ಪ್ರದೇಶದಲ್ಲಿ ಮ್ಯಾಜಿಕ್ ನಂಬರ್ 229  ಆಗಿದೆ. ಪ್ರಸ್ತುತ ಬಿಜೆಪಿ ಬಳಿ 107 ಶಾಸಕರ ಬೆಂಬಲವಿದ್ದು, ಕಾಂಗ್ರೆಸ್ 87 ಶಾಸಕರನ್ನು ಹೊಂದಿದೆ.

SCROLL FOR NEXT