ದೇಶ

ಮಧ್ಯ ಪ್ರದೇಶ 28 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ಫಲಿತಾಂಶ; ಮತ ಎಣಿಕೆ ಆರಂಭ

Srinivasamurthy VN

ಭೋಪಾಲ್: ಮಧ್ಯ ಪ್ರದೇಶದಲ್ಲೂ ಉಪ ಚುನಾವಣಾ ಮತಎಣಿಕೆ ಕಾರ್ಯ ಆರಂಭವಾಗಿದ್ದು, 28 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ.

ಹಾಲಿ ಮತ ಎಣಿಕೆ ನಡೆಯುತ್ತಿರುವ ಮಧ್ಯಪ್ರದೇಶದ 28 ಸ್ಥಾನಗಳ ಪೈಕಿ 25 ಸ್ಥಾನಗಳು ಕಾಂಗ್ರೆಸ್ ಶಾಸಕರು ಬಂಡಾಯವೆದ್ದು ಬಿಜೆಪಿಗೆ ಸೇರ್ಪಡೆಗೊಂಡ ಹಿನ್ನಲೆಯಲ್ಲಿ ಕ್ಷೇತ್ರಗಳು ಖಾಲಿಯಾಗಿದ್ದವು. 25 ಶಾಸಕರ ರಾಜಿನಾಮೆಯಿಂದಾಗಿ ಮಧ್ಯ ಪ್ರದೇಶದಲ್ಲಿ ಕಮಲ್ ನಾಥ್ ಸರ್ಕಾರ ಅಲ್ಪ ಮತಕ್ಕೆ ಕುಸಿದು ಸರ್ಕಾರ  ಪತನವಾಗಿತ್ತು. ಬಳಿಕ ರೆಬೆಲ್ ಶಾಸಕರ ಬೆಂಬಲ ಪಡೆದ ಬಿಜೆಪಿಯ ಶಿವರಾಜ್ ಸಿಂಗ್ ಚೌಹ್ವಾಣ್ ಸರ್ಕಾರ ರಚನೆ ಮಾಡಿದರು.  ಕೇಂದ್ರ ರಾಜ್ಯದ ಶಾಸಕರ ನಿಧನದ ನಂತರ ಇತರ ಮೂರು ಸ್ಥಾನಗಳನ್ನು ಖಾಲಿ ಎಂದು ಘೋಷಿಸಲಾಯಿತು. ಉಳಿದ ಮೂರು ಕ್ಷೇತ್ರಗಳಲ್ಲಿ ಶಾಸಕರು ನಿಧನರಾದ ಹಿನ್ನಲೆಯಲ್ಲಿ ಈ  ಮೂರು ಕ್ಷೇತ್ರ ಸೇರಿದಂತೆ ಒಟ್ಟು 28 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. 

ಉಪ ಚುನಾವಣೆ ನಡೆದ ಕ್ಷೇತ್ರಗಳ ಪಟ್ಟಿ ಇಂತಿದೆ.
ಮಧ್ಯಪ್ರದೇಶ: ಜೌರಾ, ಸುಮಾಲಿ, ಮೊರೆನಾ, ಡಿಮಾನಿ, ಅಂಬಾ, ಮೆಹಗಾಂವ್, ಗೋಹಾದ್, ಗ್ವಾಲಿಯರ್, ಗ್ವಾಲಿಯರ್ ಈಸ್ಟ್, ದಬ್ರಾ, ಭಂದರ್, ಕರೇರಾ, ಪೊಹಾರಿ, ಬಮೋರಿ, ಅಶೋಕ್ ನಗರ, ಮುಂಗಾವಳಿ, ಸುರ್ಖಿ, ಮಲ್ಹರಾ, ಅನುಪ್ಪೂರ್, ಸಾಂಚಿ, ಬಿಯಾತ್ ಮಿಯಾಪತ್ ನೇಪನಗರ, ಬದ್ನವಾರ್, ಸಾನ್ವರ್  ಮತ್ತು ಸುವಸ್ರಾ 

SCROLL FOR NEXT