ಜೆಡಿಯು ಬೆಂಬಲಿಗರು 
ದೇಶ

ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಮತ್ತೆ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ: ಜೆಡಿಯು

ಮುಖ್ಯಮಂತ್ರಿ ನಿತೀಶ್‌ಕುಮಾರ್‌ ನೇತೃತ್ವದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಜೆಡಿಯು ರಾಜ್ಯ ಘಟಕದ ಮುಖ್ಯಸ್ಥ ವಸಿಷ್ಠ ನಾರಾಯಣ್‌ ಸಿಂಗ್‌ ಹೇಳಿದ್ದಾರೆ. 

ಪಾಟ್ನಾ: ಮುಖ್ಯಮಂತ್ರಿ ನಿತೀಶ್‌ಕುಮಾರ್‌ ನೇತೃತ್ವದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಜೆಡಿಯು ರಾಜ್ಯ ಘಟಕದ ಮುಖ್ಯಸ್ಥ ವಸಿಷ್ಠ ನಾರಾಯಣ್‌ ಸಿಂಗ್‌ ಹೇಳಿದ್ದಾರೆ. 


ಚುನಾವಣಾ ಫಲಿತಾಂಶದ ಟ್ರೆಂಡ್ ನೋಡಿ ಮಾತನಾಡಿದ ಅವರು ‘ಇದನ್ನು ನಾನು ಬಹಳ ದಿನಗಳಿಂದಲೂ ಹೇಳುತ್ತಿದ್ದೇನೆ. ರಾಜ್ಯದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ವಿರೋಧಪಕ್ಷಗಳು ಮತದಾರರನ್ನು ಓಲೈಸಲು ಪ್ರಚಾರ ಕಾರ್ಯವನ್ನು ದಾರಿ ತಪ್ಪಿಸಿದವು ಅಷ್ಟೆ’ ಎಂದು ಹೇಳಿದರು.

ಸರ್ಕಾರವನ್ನು ಮುನ್ನಡೆಸುವುದು ಬಿಜೆಪಿಯೋ ಅಥವಾ ಜೆಡಿಯು ಪಕ್ಷವೋ ಎಂದು ಕೇಳಿದ್ದಕ್ಕೆ ಸರ್ಕಾರವನ್ನು ಯಾರು ಮುನ್ನಡೆಸಬೇಕೆಂಬ ಬಗ್ಗೆ ಪ್ರಧಾನಮಂತ್ರಿ ಮೋದಿ, ಗೃಹ ಸಚಿವ ಅಮಿತ್‌ಶಾ ಮತ್ತು ಬಿಜೆಪಿ ಅಧ್ಯಕ್ಷ ನಡ್ಡಾ ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ ಎಂದರು. 

ರಾಜ್ಯದಲ್ಲಿ ಎನ್‌ಡಿಎ ಜಯ ಸಾಧಿಸಿದರೆ ನಿತೀಶ್‌ಕುಮಾರ್‌ ಅವರೇ ಸರ್ಕಾರ ಮುನ್ನಡೆಸುವರು ಎಂದು ಮೂವರೂ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿಸಿದರು. 126 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 73 ಜೆಡಿಯು 47  ಮತ್ತು ವಿಐಪಿ ಆರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಜೂನ್ 3ರಂದು ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಲೋಕಭವನದಲ್ಲಿ ಪ್ರಮಾಣವಚನ!

ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಭಾರೀ ಅಗ್ನಿ ಅವಘಡ; ಹೊತ್ತಿ ಉರಿದ ಇಡೀ ಕಟ್ಟಡ!

ಪರಮಾಣು ದಾಳಿಯಿಂದ ರಕ್ಷಣೆ, ಪ್ರತಿದಾಳಿಗೆ ಚೀನಾ ಮಾಸ್ಟರ್ ಪ್ಲಾನ್: ಸೈಲೋಗಳ ಸಮೀಪ ಲಾಂಚ್ ಪ್ಯಾಡ್ ಗಳ ನಿರ್ಮಾಣ! ಉಪಗ್ರಹ ಚಿತ್ರಗಳಲ್ಲಿ ಬಹಿರಂಗ

ಜೂನ್‌ನಲ್ಲಿ ಸಂಪುಟ ಪುನಾರಚನೆ: ಡಜನ್‌ಗೂ ಹೆಚ್ಚು ಸಚಿವರಿಗೆ ಕೊಕ್; ಕೇಂದ್ರ ಸಚಿವರೊಬ್ಬರಿಗೆ ಕರ್ನಾಟಕ BJP ಅಧ್ಯಕ್ಷ ಹುದ್ದೆ!

IPL 2026: 'ಪ್ಲೇ ಆಫ್ ಗೆ ಅರ್ಹತೆ ಪಡೆಯುವ ಸಾಧ್ಯತೆಯೇ ಇರಲಿಲ್ಲ, ಆದ್ರೆ..': ವೈಭವ್ ಸೂರ್ಯವಂಶಿ ಕುರಿತು RR ನಾಯಕ ರಿಯಾನ್ ಪರಾಗ್ ದೊಡ್ಡ ಹೇಳಿಕೆ!

SCROLL FOR NEXT