ದೇಶ

ಕೋವ್ಯಾಕ್ಸಿನ್ 3 ನೇ ಹಂತದ ಟ್ರಯಲ್ ಗೆ ಒಳಪಡಲು ನೋಂದಾಯಿಸಿದ ಎಎಂಯು ಉಪಕುಲಪತಿ!

Srinivas Rao BV

ಲಖನೌ: ಕೊರೋನಾ ವೈರಸ್ ಗೆ ಲಸಿಕೆ ಕಂಡುಹಿಡಿಯಲಾಗುತ್ತಿದ್ದು, ಕೋವ್ಯಾಕ್ಸಿನ್ ಲಸಿಕೆ ಟ್ರಯಲ್ ಮೂರನೇ ಹಂತದಲ್ಲಿದೆ.

ಕೋವಿಡ್-19 ಗೆ ಕೋವ್ಯಾಕ್ಸಿನ್ ಎಂಬ ಲಸಿಕೆ ತಯಾರಾಗುತ್ತಿದ್ದು, ಎಎಂಯು ಉಪಕುಲಪತಿ ಪ್ರೊಫೆಸರ್ ತಾರೀಕ್ ಮನ್ಸೂರ್ ಸ್ವತಃ ಸ್ವಯಂಪ್ರೇರಣೆಯಿಂದ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಒಳಪಡಲು ಒಪ್ಪಿಗೆ ಸೂಚಿಸಿ ಸಹಿ ಹಾಕಿದ್ದಾರೆ.

ಅಲೀಘರ್ ಮುಸ್ಲಿಂ ಯುನಿವರ್ಸಿಟಿಯ ಜೆಎನ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ (ಜೆಎನ್ಎಂಸಿಎಚ್)ಯಲ್ಲಿ  ಭಾರತ್ ಬಯೋಟೆಕ್ ಸಂಸ್ಥೆ 3 ನೇ ಹಂತದ ಪರೀಕ್ಷೆ ನಡೆಸುತ್ತಿದೆ.

ಪ್ರೊಫೆಸರ್ ತಾರಿಕ್ ಮನ್ಸೂರ್ ತಮ್ಮನ್ನು ತಾವು ನೋಂದಾಯಿಸಿಕೊಂಡಿದ್ದು ಇತರರಿಗೂ ಮಾದರಿಯಾಗಿದ್ದಾರೆ.

ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಸಹಯೋಗದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಟ್ರಯಲ್ ನಲ್ಲಿದ್ದು ಸುರಕ್ಷಾ ಹಾಗೂ ಪರಿಣಾಮಕಾರಿತ್ವದ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ.

ಸ್ವಯಂ ಪ್ರೇರಣೆಯಿಂದ ಪರೀಕ್ಷೆಗೆ ಒಳಪಡುವುದರಿಂದ ಮಹತ್ವದ ಸಂಶೋಧನೆಯಲ್ಲಿ ಭಾಗಿಯಾಗುವಂತೆ ಮಾಡಲಾಗುತ್ತದೆ, ಇದರಿಂದ ಒಳ್ಳೆಯ ಚಿಕಿತ್ಸೆ ಆಯ್ಕೆಗಳು ಹೊರಬರಲಿದೆ ಎಂದು ಎಎಂಯು ವಿಸಿ ಹೇಳಿದ್ದಾರೆ.

SCROLL FOR NEXT