ದೇಶ

ಎಸ್ ಸಿಒ ಸಭೆ: ಭಾರತಕ್ಕೆ ರಷ್ಯಾ ಬೆಂಬಲ; ಚೀನಾ, ಪಾಕ್ ಗೆ ತೀವ್ರ ಹಿನ್ನಡೆ

Srinivas Rao BV

ನವದೆಹಲಿ: ಶಾಂಘೈ ಸಹಕಾರ ಒಕ್ಕೂಟ (ಎಸ್ ಸಿಒ) ಸಭೆಗೆ ಸಂಬಂಧಿಸಿದಂತೆ ಭಾರತದ ಬೆನ್ನಿಗೆ ರಷ್ಯಾ ನಿಂತಿದ್ದು ಚೀನಾ, ಪಾಕ್ ಗೆ ತೀವ್ರ ಹಿನ್ನಡೆ ಉಂಟಾಗಿದೆ.

ಜೀ ನ್ಯೂಸ್ ಜಾಲತಾಣ ಪ್ರಕಟಿಸಿರುವ ವರದಿಯ ಪ್ರಕಾರ ಮುಂಬರುವ ಎಸ್ ಸಿಒ ಸಭೆಯಲ್ಲಿ ದ್ವಿಪಕ್ಷೀಯ ವಿಷಯಗಳನ್ನು ಪ್ರಸ್ತಾಪಿಸುವಂತಿಲ್ಲ ಎಂದು ರಷ್ಯಾ ಹೇಳಿದೆ. 

ಎಸ್ ಸಿಒ ಸಭೆಯಲ್ಲಿ ದ್ವಿಪಕ್ಷೀಯ ವಿಷಯಗಳನ್ನು ಪ್ರಸ್ತಾಪಿಸುವುದು ನಿಯಮ ಹಾಗೂ ಎಸ್ ಸಿಒ ಪಾಲಿಸುತ್ತಿರುವ ಶಿಸ್ತಿನ ಉಲ್ಲಂಘನೆ ಎಂಬುದು ಭಾರತದ ನಿಲುವಾಗಿದೆ. ಈ ನಿಲುವಿಗೆ ಭಾರತ ಬದ್ಧವಾಗಿದ್ದು, ಭಾರತಕ್ಕೆ ರಷ್ಯಾ ಬೆಂಬಲಿಸಿದೆ.

ಕಳೆದ ಬಾರಿ ವರ್ಚ್ಯುಯಲ್ ಎಸ್ ಸಿಒ ಸಭೆಯಲ್ಲಿ ಪಾಕಿಸ್ತಾನ ಭಾರತ-ಪಾಕಿಸ್ತಾನದ ದ್ವಿಪಕ್ಷೀಯವನ್ನು ಪ್ರಸ್ತಾಪಿಸಿತ್ತು, ಅಷ್ಟೇ ಅಲ್ಲದೇ ಪಾಕ್ ಭೂಪಟದಲ್ಲಿ ಕಾಶ್ಮೀರವನ್ನು ಚಿತ್ರಿಸಿದ್ದ ಕಾರಣದಿಂದ ಶಾಂಘೈ ಸಹಕಾರ ಒಕ್ಕೂಟದ ಎನ್ ಎಸ್ಎ ಗಳ ಸಭೆಯಿಂದ ಎನ್ಎಸ್ಎ ಅಜಿತ್ ದೋವಲ್ ಹೊರನಡೆದಿದ್ದರು.

ಈಗ ರಷ್ಯಾ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದ್ದು, ಈ ಬಾರಿ ದ್ವಿಪಕ್ಷೀಯ ವಿಷಯಗಳನ್ನು ಪ್ರಸ್ತಾಪಿಸುವುದಕ್ಕೆ ಎಸ್ ಸಿಒ ಸಭೆಯಲ್ಲಿ ಅವಕಾಶವಿಲ್ಲ, ಈ ಅಂಶವನ್ನು ಎಲ್ಲಾ ಸದಸ್ಯ ರಾಷ್ಟ್ರಗಳ ಗಮನಕ್ಕೆ ತರಲಾಗಿದೆ. ಎಸ್ ಸಿಒ ಇರುವುದು ಸದಸ್ಯ ರಾಷ್ಟ್ರಗಳ ನಡುವಿನ ಬಹುಪಕ್ಷೀಯ ಸಹಕಾರಕ್ಕಾಗಿ ಎಂದು ರಷ್ಯಾ ತಿಳಿಸಿದೆ.

SCROLL FOR NEXT