ದೇಶ

ಯುಎಸ್ ಸೈಬರ್ ಸೆಕ್ಯುರಿಟಿ ವಿದ್ಯಾರ್ಥಿವೇತನಕ್ಕೆ ದೆಹಲಿ ವಿದ್ಯಾರ್ಥಿನಿ ಮೋನಿಕಾ ಕುಮಾರಿ ಆಯ್ಕೆ

Lingaraj Badiger

ನವದೆಹಲಿ: ಇಂದಿರಾ ಗಾಂಧಿ ಮಹಿಳಾ ತಾಂತ್ರಿಕ ವಿಶ್ವವಿದ್ಯಾಲಯ(ಐಜಿಟಿಯುಡಬ್ಲ್ಯು)ದ ದ್ವಿತೀಯ ವರ್ಷದ ಎಂ.ಟೆಕ್ ವಿದ್ಯಾರ್ಥಿನಿ ಮೋನಿಕಾ ಕುಮಾರಿ ಅವರು ಅಮೆರಿಕದ ಸೈಬರ್ ಸೆಕ್ಯುರಿಟಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ.

ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಭಾರತದ ಮೊದಲ ಮಹಿಳೆ ಎಂಬ ಗೌರವಕ್ಕೆ ಮೋನಿಕಾ ಪಾತ್ರರಾಗಿದ್ದು, 10 ಸಾವಿರ ಅಮೆರಿಕನ್ ಡಾಲರ್ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ.

ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿ ಸೈಬರ್-ಅಪಾಯವನ್ನು ಕಡಿಮೆ ಮಾಡಲು ಮೀಸಲಾಗಿರುವ ಹಣಕಾಸು ಸೇವೆಗಳ ಮಾಹಿತಿ ಹಂಚಿಕೆ ವಿಶ್ಲೇಷಣೆ ಕೇಂದ್ರ(ಎಫ್‌ಎಸ್-ಐಎಸ್ಎಸಿ) 2016 ರಿಂದ ಯುವತಿಯವರಿಗೆ ಈ ವಿದ್ಯಾರ್ಥಿ ವೇತನ ನೀಡುತ್ತಿದೆ.

ಎಫ್‌ಎಸ್-ಐಎಸ್‌ಎಸಿ ಪ್ರತಿ ವರ್ಷ ವಿಶ್ವದಾದ್ಯಂತ 14 ಮಹಿಳೆಯರನ್ನು ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡುತ್ತದೆ ಮತ್ತು ಅವರ ವೃತ್ತಿಜೀವನದಲ್ಲಿ ಹೆಚ್ಚಿನ ಸಾಧನೆ ಮಾಡಲು ಮಾರ್ಗದರ್ಶನ ನೀಡುತ್ತದೆ.

SCROLL FOR NEXT