ದೇಶ

ಕೋವಿಡ್-19 ಎಫೆಕ್ಟ್: ತೆಲಂಗಾಣದಲ್ಲಿ 2 ಗಂಟೆ ಮಾತ್ರ ಹಸಿರು ಪಟಾಕಿ ಹೊಡೆಯಲು 'ಸುಪ್ರೀಂ' ಅವಕಾಶ!

Srinivasamurthy VN

ನವದೆಹಲಿ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ತೆಲಂಗಾಣದಲ್ಲಿ 2 ಗಂಟೆ ಮಾತ್ರ ಹಸಿರು ಪಟಾಕಿ ಹೊಡೆಯಲು 'ಸುಪ್ರೀಂ ಕೋರ್ಟ್' ಅವಕಾಶ ನೀಡಿದೆ.

ಹೈಕೋರ್ಟ್ ನಿರ್ದೇಶನದ ಮೇರೆಗೆ ಈ ಹಿಂದೆ ಎಲ್ಲ ರೀತಿಯ ಪಟಾಕಿ ಮಾರಾಟ ಮತ್ತು ಬಳಕೆ ಮೇಲೆ ತೆಲಂಗಾಣ ಸರ್ಕಾರ ನಿಷೇಧ ಹೇರಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ತೆಲಂಗಾಣ ಪಟಾಕಿ ಮಾರಾಟಗಾರರ ಸಂಘ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ದಾಖಲಿಸಿತ್ತು. ಈ ಅರ್ಜಿಯ  ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಾದ ಎಎಂ ಖಾನ್ವಿಲ್ಕರ್ ಮತ್ತು ಸಜೀವ್ ಖನ್ನಾ ನೇತೃತ್ವ ದ್ವಿಸದಸ್ಯ ಪೀಠ 2 ಗಂಟೆ ಮಾತ್ರ ಹಸಿರು ಪಟಾಕಿ ಮಾರಾಟ ಮತ್ತು ಬಳಕೆಗೆ ಅವಕಾಶ ನೀಡಿದೆ.

ಅಂತೆಯೇ ನವೆಂಬರ್ 9 ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವಿಧಿಸಿರುವ ನಿರ್ಬಂಧಗಳನ್ನು ತೆಲಂಗಾಣ ರಾಜ್ಯ ಸರ್ಕಾರ ಗಮನಿಸಬೇಕು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.

SCROLL FOR NEXT