ದೇಶ

ಅಜಾಗರೂಕತೆಯಿಂದ ಅಮಿತ್ ಶಾ ಅವರ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಲಾಗಿತ್ತು: ಟ್ವಿಟ್ಟರ್ ಸ್ಪಷ್ಟನೆ

Raghavendra Adiga

ನವದೆಹಲಿ: "ಅಜಾಗರೂಕತೆಯಿಂದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ  ಟ್ವಿಟ್ಟರ್ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಲಾಗಿದೆ ಮತ್ತು ಈ ದೋಷವನ್ನು ತಕ್ಷಣವೇ ಸರಿಪಡಿಸಲಾಗಿದೆ" ಎಂದು  ಟ್ವಿಟ್ಟರ್ ತಿಳಿಸಿದೆ.

ಸಚಿವರ ಖಾತೆ ಇದೀಗ ಸಂಪೂರ್ಣ ಕ್ರಿಯಾಶೀಲವಾಗಿದೆ ಎಂದು ಟ್ವಿಟ್ಟರ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಕೃತಿಸ್ವಾಮ್ಯ ಹೊಂದಿರುವವರ ವರದಿಗೆ" ಪ್ರತಿಕ್ರಿಯೆಯಾಗಿ ಷಾ ಅವರ ಟ್ವಿಟ್ಟರ್ ಡಿಸ್ಪ್ಲೇ ಚಿತ್ರವನ್ನು ಟ್ವಿಟ್ತರ್ ಗುರುವಾರ ತೆಗೆದುಹಾಕಿತ್ತು. ಷಾ ಅವರ ಚಿತ್ರದ ಮೇಲೆ ಕ್ಲಿಕ್ ಮಾಡಿದಾಗ ಮೀಡಿಯಾ ನಾಟ್ ಡಿಸ್ಪ್ಲೇಡ್ ಕೃತಿಸ್ವಾಮ್ಯ ಹೊಂದಿರುವವರ ವರದಿಗನುಸಾರವಾಗಿ ಚಿತ್ರವನ್ನು ತೆಗೆದುಹಾಕಲಾಗಿದೆ" ಎಂಬ ಸಂದೇಶ ಹಾಗೂ ಖಾಲಿ ಪುಟ ಬರುತ್ತಿತ್ತು.

"ಅಜಾಗರೂಕತೆಯಿಂದಾಗಿ ನಮ್ಮ ಜಾಗತಿಕ ಹಕ್ಕುಸ್ವಾಮ್ಯ ನೀತಿಗಳ ಅಡಿಯಲ್ಲಿ ನಾವು ಈ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಿದ್ದೆವು, ಆದರೆ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಲಾಗಿದೆ,ಇದೀಗ ಖಾತೆ ಸಂಪೂರ್ಣ ಕ್ರಿಯಾಶೀಲವಾಗಿದೆ." ಎಂದು ಟ್ವಿಟ್ಟರ್  ವಕ್ತಾರರು ಹೇಳಿದ್ದಾರೆ.

ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಷಾ 23.6 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಬದಲಿಗೆ ಜಮ್ಮು ಮತ್ತು ಕಾಶ್ಮೀರದ ಭಾಗವಾಗಿ ಲೇಹ್ ಅನ್ನು ತೋರಿಸುವಂತೆ ಸರ್ಕಾರ ಟ್ವಿಟ್ಟರ್ ಗೆ ನೋಟಿಸ್ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಐಟಿ ಸಚಿವಾಲಯದ ಮೂಲಗಳ ಪ್ರಕಾರ, ತಪ್ಪಾದ ನಕ್ಷೆಯನ್ನು ತೋರಿಸುವ ಮೂಲಕ ಭಾರತದ ಪ್ರಾದೇಶಿಕ ಸಮಗ್ರತೆಗೆ ಅಗೌರವ ತೋರಿದ ಟ್ವಿಟ್ಟರ್  ಮತ್ತು ಅದರ ಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮಗಳನ್ನು ಏಕೆ ಪ್ರಾರಂಭಿಸಬಾರದು ಎಂದು ಐದು ಕೆಲಸದ ದಿನಗಳಲ್ಲಿ ಸ್ಪಷ್ಟನೆ ನೀಡಲು ಟ್ವಿಟ್ತರ್ ಗೆ ನಿರ್ದೇಶಿಸಲಾಗಿದೆ.

SCROLL FOR NEXT