ದೇಶ

ಕೊರೋನಾ: ಕೇರಳದಲ್ಲಿ ಇಂದು 2,710 ಹೊಸ ಸೋಂಕು ಪ್ರಕರಣ ದಾಖಲು!

Srinivasamurthy VN

ಕೊಚ್ಚಿ: ಮಾರಕ ಕೊರೋನಾ ಸೋಂಕಿನ ಹಾವಳಿ ಕೇರಳದಲ್ಲಿ ಮುಂದುವರೆದಿದ್ದು, ಇಂದು ಮತ್ತೆ 2,710 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.

ಈ ಕುರಿತಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಮಾಹಿತಿ ನೀಡಿದ್ದು, ಕೇರಳದಲ್ಲಿ ಇಂದು ಒಂದೇ ದಿನ 2,710 ಹೊಸ ಸೋಂಕು ಪ್ರಕರಣಗಳು ದಾಖಲಾಗಿದೆ. ಆ ಮೂಲಕ ಕೇರಳದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 5, 27, 708ಕ್ಕೇರಿದೆ. ಅಂತೆಯೇ ಇಂದು 6,567 ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 4, 54, 774ಕ್ಕೆ ಏರಿಕೆಯಾಗಿದೆ.

ಇಂದು 19 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಕೇರಳದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 1888ಕ್ಕೇರಿದೆ ಎಂದು ಕೇರಳ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

SCROLL FOR NEXT