ದೇಶ

ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಲಾಕ್ ಡೌನ್ ಇಲ್ಲ- ಆರೋಗ್ಯ ಸಚಿವ

Nagaraja AB

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಕೋವಿಡ್-19 ಮೂರನೇ ಹಂತದ ಅಲೆಗೆ ತತ್ತರಿಸುತ್ತಿದ್ದರೂ ಮತ್ತೆ ಲಾಕ್ ಡೌಕ್ ಹೇರುವುದಿಲ್ಲ ಎಂದು ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಸೋಮವಾರ ಸ್ಪಷ್ಪಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಕೋವಿಡ್-19 ಮೂರನೇ ಹಂತದ ಅಲೆ ಉತ್ತುಂಗಕ್ಕೇರಿದರೂ ಮತ್ತೆ ಲಾಕ್ ಡೌನ್ ಮಾಡುವುದು ಪರಿಣಾಮಕಾರಿ ಕ್ರಮ ಅನಿಸುತ್ತಿಲ್ಲ, ಪ್ರತಿಯೊಬ್ಬರು ಮಾಸ್ಕ್ ಧರಿಸುವುದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದರು.

ನಿನ್ನೆ ದಿನ 3, 235 ಪ್ರಕರಣಗಳು ವರದಿಯಾಗಿದ್ದು, 7, 606 ಜನರು ಗುಣಮುಖರಾಗಿದ್ದಾರೆ. 95 ಮಂದಿ ಸಾವನ್ನಪ್ಪಿದ್ದಾರೆ. ಐಸಿಯು ಹಾಸಿಗೆಗಳ ಕೊರತೆಯಿದೆ.  ಕೇಂದ್ರ ಗೃಹ ಸಚಿವರೊಂದಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತುಕತೆ ನಡೆಸಿದ್ದು, ದೆಹಲಿಯಲ್ಲಿನ ಕೇಂದ್ರಿಯ ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. 750 ಹಾಸಿಗೆಗಳನ್ನು ಹೆಚ್ಚಿಸುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರ ರಾಜಧಾನಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದವರು ಹಾಗೂ ಮಾಸ್ಕ್ ಧರಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸತ್ಯೇಂದರ್ ಜೈನ್ ತಿಳಿಸಿದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಾರ ದೆಹಲಿಯಲ್ಲಿ 39, 900 ಸಕ್ರಿಯ ಕೋವಿಡ್-19 ಪ್ರಕರಣಗಳಿದ್ದು, 4, 37,801 ಸೋಂಕಿತರು ಗುಣಮುಖರಾಗಿದ್ದಾರೆ. 7,614 ಮಂದಿ ಸಾವನ್ನಪ್ಪಿದ್ದಾರೆ.

SCROLL FOR NEXT