ದೇಶ

ಕೋವಿಡ್-19: ದೇಶಾದ್ಯಂತ ಚೇತರಿಕೆ ಪ್ರಮಾಣದಲ್ಲಿ ಗಣನೀಯ ಹೆಚ್ಚಳ, ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಇಳಿಕೆ

Nagaraja AB

ನವದೆಹಲಿ: ದೇಶಾದ್ಯಂತ ಕೋವಿಡ್-19 ಚೇತರಿಕೆ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ತೀವ್ರ ರೀತಿಯ ಇಳಿಕೆ ಕಂಡುಬಂದಿದೆ.

ದೇಶಾದ್ಯಂತ 82, 49, 579 ಸೋಂಕಿತರು ಅಂದರೆ ಶೇ. 93, 27 ರಷ್ಟು ಮಂದಿ ಕೋವಿಡ್-19 ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯದ ಪ್ರಕರಣಗಳ ಸಂಖ್ಯೆ  4, 65, 478 ( ಶೇ. 5.26) ಆಗಿದೆ. 1, 30,070 ಸೋಂಕಿತರು ಮೃತಪಟ್ಟಿದ್ದು, ಮರಣ ಪ್ರಮಾಣ ಶೇ. 1. 47 ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ  30, 548 ಹೊಸ ಪ್ರಕರಣಗಳು ಕಂಡುಬಂದಿದ್ದು, 435 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ದೇಶದಲ್ಲಿ ಸತತ ಒಂಬತ್ತನೇ ದಿನ 50 ಸಾವಿರಕ್ಕಿಂತಲೂ ಕಡಿಮೆ ಪ್ರಮಾಣದ ಪ್ರಕರಣಗಳು ವರದಿಯಾಗಿದೆ. ನವೆಂಬರ್ 7ರವರೆಗೂ ಪ್ರತಿದಿನ ವರದಿಯಾಗುತ್ತಿದ್ದ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ 50 ಸಾವಿರ ಗಡಿಯನ್ನು ದಾಟುತಿತ್ತು.

ಭಾನುವಾರ  ಕೇವಲ 8, 61, 706 ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದ್ದು, ನಿನ್ನೆಯವರೆಗೂ ಒಟ್ಟಾರೇ 12,56,98,525 ರಷ್ಟು ಕೋವಿಡ್-19 ಸಂಬಂಧಿತ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.

SCROLL FOR NEXT