ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ರಾಜಸ್ಥಾನ ಸಚಿವ ಭನ್ವರ್‌ ಲಾಲ್‌ ಮೇಘವಾಲ್‌ ನಿಧನ

ರಾಜಸ್ಥಾನದ ಸಂಪುಟ ದರ್ಜೆ ಸಚಿವ ಭನ್ವರ್‌ ಲಾಲ್‌ ಮೇಘವಾಲ್‌ (72) ಸೋಮವಾರ ನಿಧನರಾಗಿದ್ದಾರೆ.

ಭನ್ವರ್ ಲಾಲ್ ಮೇಘರಾಜ್
Shilpa D
Updated On : 17 Nov 2020, 12:32 pm

ನವದೆಹಲಿ: ರಾಜಸ್ಥಾನದ ಸಂಪುಟ ದರ್ಜೆ ಸಚಿವ ಭನ್ವರ್‌ ಲಾಲ್‌ ಮೇಘವಾಲ್‌ (72) ಸೋಮವಾರ ನಿಧನರಾಗಿದ್ದಾರೆ.

ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾದರು. ರಾಜಸ್ಥಾನ ಸರ್ಕಾರವು ಮಂಗಳವಾರ ರಾಜ್ಯದಾದ್ಯಂತ ಶೋಕಾಚರಣೆ ಘೋಷಿಸಿದ್ದು, ಎಲ್ಲ ಸರ್ಕಾರಿ ಕಚೇರಿಗಳು ಮುಚ್ಚಿರಲಿವೆ. 

ಸಚಿವರ ಗೌರವಾರ್ಥ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸಲು ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ನೇತೃತ್ವದ ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರದಲ್ಲಿ ಭನ್ವರ್‌ ಲಾಲ್‌ ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರಾಗಿದ್ದರು.  ಸುಜನ್‌ಗಢದ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದ ಅವರು ಶಿಕ್ಷಣ ಸಚಿವರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement