ದೇಶ

ಲಡಾಕ್ ನಲ್ಲಿ ಚೀನಾ ಭಾರತದ ಮೇಲೆ ಮೈಕ್ರೊವೇವ್ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎಂಬ ಸುದ್ದಿ ಸುಳ್ಳು: ಭಾರತೀಯ ಸೇನೆ 

Sumana Upadhyaya

ನವದೆಹಲಿ: ಲಡಾಕ್ ಗಡಿಯಲ್ಲಿ ಭಾರತೀಯ ಸೇನೆಯನ್ನು ಸೋಲಿಸಲು ಚೀನಾ ಮೈಕ್ರೊವೇವ್ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ ಎಂದು ಚೀನಾದ ಪ್ರಾಧ್ಯಾಪಕರೊಬ್ಬರು ಹೇಳಿರುವ ಮಾತನ್ನು ಭಾರತ ತಳ್ಳಿಹಾಕಿದೆ.

ಮೈಕ್ರೊವೇವ್ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ಚೀನಾ ಸುಳ್ಳು ಸುದ್ದಿಯ ಬೀಜವನ್ನು ಬಿತ್ತುತ್ತಿದೆ. ಇದು ಸ್ಪಷ್ಟವಾಗಿ ಚೀನಾದ ಬಡ ಬುದ್ದಿಹೀನರು ಮಾಡುತ್ತಿರುವ ಕೆಲಸ ಎಂದು ಭಾರತದ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಲಡಾಕ್ ಪ್ರಾಂತ್ಯದಲ್ಲಿ ತಮ್ಮಸೇನೆ ಸದ್ಯ ಹಿಡಿತ ಹೊಂದಿದ್ದು, ಚೀನಾದ ಮಾಧ್ಯಮಗಳು ಮಾಡುತ್ತಿರುವ ಸುದ್ದಿಯು ನಕಲಿಯಾಗಿದೆ. ಲಡಾಕ್ ನಲ್ಲಿ ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ.

ಚೀನಾದ ಬೀಜಿಂಗ್ ಮೂಲದ ಪ್ರೊಫೆಸರ್ ಒಬ್ಬರು, ಚೀನಾದ ಸೇನಾಪಡೆಗಳು ಪರ್ವತದ ಅತಿ ಎತ್ತರ ಪ್ರದೇಶವನ್ನು ಮೈಕ್ರೊವೇವ್ ಒವನ್ ಆಗಿ ಬಳಸಿ ವಿವಾದಿತ ಗಡಿ ಪ್ರದೇಶದಲ್ಲಿ ಎರಡು ಪ್ರಮುಖ ಪರ್ವತಪ್ರದೇಶಗಳನ್ನು ಮರುವಶಪಡಿಸಿಕೊಂಡಿದೆ ಎಂದು ಹೇಳಿದ್ದಾರೆ ಎಂದು ವಾಷಿಂಗ್ಟನ್ ಎಕ್ಸಾಮಿನರ್ ವರದಿ ಮಾಡಿತ್ತು.

ಈ ದಾಳಿ ಕಳೆದ ಆಗಸ್ಟ್ 29ರಂದು ನಡೆದಿತ್ತು ಎಂದು ಚೀನಾದ ಪ್ರೊಫೆಸರ್ ಹೇಳಿದರೆ, ಭಾರತೀಯ ಅಧಿಕಾರಿಗಳು ಅದು ನಡೆದೇ ಇಲ್ಲ ಎನ್ನುತ್ತಾರೆ.ಪರ್ವತ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದ್ದರೆ ಅಲ್ಲಿಂದ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಚೀನಾ ಏಕೆ ಕೇಳಬೇಕಾಗಿತ್ತು, ನಮ್ಮ ಸೈನಿಕರು, ಬೃಹತ್ ಟ್ಯಾಂಕರ್ ಗಳು, ಶಸ್ತ್ರಾಸ್ತ್ರಗಳು ಇನ್ನೂ ಅಲ್ಲಿ ನಿಯೋಜನೆಗೊಂಡಿವೆ, ಎತ್ತರದ ಭಾಗದಿಂದ ಇನ್ನೂ ನಮ್ಮ ಸೇನೆ ಹಿಂತೆಗೆದುಕೊಂಡಿಲ್ಲ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಹೇಳಿದ್ದಾರೆ.

SCROLL FOR NEXT