ಮಮತಾ ಬ್ಯಾನರ್ಜಿ 
ದೇಶ

ತೃಣಮೂಲ ಕಾಂಗ್ರೆಸ್ ಮಮತಾ ಬ್ಯಾನರ್ಜಿಯವರ ಕೈಯಲ್ಲಿ ಉಳಿದಿಲ್ಲ: ಶಾಸಕ ಮಿಹಿರ್ ಗೋಸ್ವಾಮಿ

ತೃಣಮೂಲ ಕಾಂಗ್ರೆಸ್ ನ ಆಡಳಿತ ಮಮತಾ ಬ್ಯಾನರ್ಜಿಯವರ ಕೈಯಲ್ಲಿ ಉಳಿದಿಲ್ಲ, ಹೀಗಾಗಿ ಆ ಪಕ್ಷದಲ್ಲಿ ಇನ್ನು ಇರಲು ಸಾಧ್ಯವಿಲ್ಲ ಎಂದು ಮಿಹಿರ್ ಗೋಸ್ವಾಮಿಯವರು ಹೇಳಿದ್ದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಕೋಲ್ಕತ್ತಾ:ತೃಣಮೂಲ ಕಾಂಗ್ರೆಸ್ ನ ಆಡಳಿತ ಮಮತಾ ಬ್ಯಾನರ್ಜಿಯವರ ಕೈಯಲ್ಲಿ ಉಳಿದಿಲ್ಲ, ಹೀಗಾಗಿ ಆ ಪಕ್ಷದಲ್ಲಿ ಇನ್ನು ಇರಲು ಸಾಧ್ಯವಿಲ್ಲ ಎಂದು ಮಿಹಿರ್ ಗೋಸ್ವಾಮಿಯವರು ಹೇಳಿದ್ದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ತೃಣಮೂಲ ಕಾಂಗ್ರೆಸ್ ನ ಶಾಸಕರಾಗಿದ್ದ ಮಿಹಿರ್ ಗೋಸ್ವಾಮಿಯವರು ಹಠಾತ್ತನೆ ಪಕ್ಷದಿಂದ ಹೊರನಡೆದಿದ್ದು ಹಾಗೂ ನಂತರ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಆರೋಪ ವ್ಯಾಪಕವಾಗಿ ಸುದ್ದಿಯಾಗಿದೆ.

ಟಿಎಂಸಿಯೊಳಗೆ ಇದ್ದುಕೊಂಡು ಸಾಕಷ್ಟು ಅವಮಾನಗಳನ್ನು ಸಹಿಸಿಕೊಂಡಿದ್ದೇನೆ, ಅವೆಲ್ಲವನ್ನೂ ಸಹಿಸಿಕೊಂಡಿದ್ದು ಒಂದೇ ಕಾರಣಕ್ಕೆ ಅದು ದೀದಿಯವರಿಗೋಸ್ಕರ, ಆದರೆ ಇನ್ನು ಸಾಧ್ಯವಿಲ್ಲ, ಟಿಎಂಸಿ ಆಡಳಿತ ಈಗ ಅವರ ಕೈಯಲ್ಲಿ, ಅವರ ನಿಯಂತ್ರಣದಲ್ಲಿ ಉಳಿದಿಲ್ಲ. ಹೀಗಾಗಿ ಅದು ನನ್ನ ಪಕ್ಷವಾಗುವುದಿಲ್ಲ, ಅಲ್ಲಿರುವುದರಲ್ಲಿ ಅರ್ಥವಿಲ್ಲ ಎಂದು ಹೊರನಡೆದಿದ್ದೇನ ಎಂದು ಸೋಷಿಯಲ್ ಮೀಡಿಯಾದಲ್ಲಿ ಮಿಹಿರ್ ಗೋಸ್ವಾಮಿ ಬರೆದುಕೊಂಡಿದ್ದಾರೆ.

ಕಳೆದ 30 ವರ್ಷಗಳಿಂದ ಮಮತಾ ಬ್ಯಾನರ್ಜಿಯವರ ಜೊತೆಗಿದ್ದೆ. 1998ರಲ್ಲಿ ಟಿಎಂಸಿ ಸ್ಥಾಪನೆಯಾದಾಗಿನಿಂದ ಅವರ ಜೊತೆ ಗುರುತಿಸಿಕೊಂಡಿದ್ದೇನೆ, ಇದೀಗ ಅನಿವಾರ್ಯವಾಗಿ ಹೊರನಡೆಯಬೇಕಾಗಿ ಬಂದಿದೆ ಎಂದು ಕೂಚ್ ಬೆಹರ್ ದಕ್ಷಿಣ್ ಶಾಸಕರಾಗಿರುವ ಮಿಹಿರ್ ಗೋಸ್ವಾಮಿ ಹೇಳಿದ್ದಾರೆ.

ಪಕ್ಷದ ಎಲ್ಲಾ ಸಂಘಟನಾತ್ಮಕ ಹುದ್ದೆಗಳಿಂದ ಹೊರಬರುವುದಾಗಿ ತೀರ್ಮಾನಿಸಿ ಘೋಷಿಸಿದ ಆರು ವಾರಗಳ ನಂತರವೂ ತಮಗೆ ಯಾವುದೇ ಟೆಲಿಫೋನ್ ಕರೆ ಮಮತಾ ಬ್ಯಾನರ್ಜಿಯವರಿಂದ ಬಂದಿಲ್ಲ, ಪಕ್ಷದಿಂದ ಯಾವುದೇ ಅಮಾನತು, ಹೊರಹಾಕುವ ಆದೇಶ ಕೂಡ ಬಂದಿಲ್ಲ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಚುನಾವಣೆ ಘೋಷಣೆಯಾದ್ರೆ 25 ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ ಹೊಸ ಬಾಂಬ್‌

KPSC ನೇಮಕಾತಿ ಹಗರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆಗೆ 5 ದಿನ ಜಾಮೀನು ಮಂಜೂರು; ಇಲ್ಲಿದೆ ಕಾರಣ...

ರಸ್ತೆ ಮಧ್ಯೆ ನಮಾಜ್ ಮಾಡುತ್ತಿದ್ದ ಪಾಕ್‌ ಮೂಲದ ವಿದ್ಯಾರ್ಥಿನಿಗೆ ಕಾರು ಢಿಕ್ಕಿ, ಸಾವು; ಚಾಲಕನಿಗೆ ಜೈಲು ಶಿಕ್ಷೆ ವಿನಾಯಿತಿ!