ದೇಶ

ಬೆಟ್ಟಿಂಗ್ ಕಾನೂನು ಬದ್ಧಗೊಳಿಸುವುದರಿಂದ ಮ್ಯಾಚ್ ಫಿಕ್ಸಿಂಗ್ ನಿಯಂತ್ರಿಸಬಹುದು: ಕೇಂದ್ರ ಸಚಿವ ಅನುರಾಗ್ ಠಾಕೂರ್

Lingaraj Badiger

ಮುಂಬೈ: ಬೆಟ್ಟಿಂಗ್ ಅನ್ನು ಕಾನೂನು ಬದ್ಧಗೊಳಿಸುವುದರಿಂದ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಆದಾಯ ಬರುತ್ತದೆ ಮತ್ತು ಮ್ಯಾಚ್ ಫಿಕ್ಸಿಂಗ್‌ನಂತಹ "ಅಪವಿತ್ರ ಹಾಗೂ ಭ್ರಷ್ಟ" ಪದ್ಧತಿಗಳನ್ನು ನಿಯಂತ್ರಿಸಬಹುದು ಎಂದು ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಗುರುವಾರ ಹೇಳಿದ್ದಾರೆ.

ಐಸಿಐಸಿಐ ಸೆಕ್ಯುರಿಟೀಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ, ದೇಶದಲ್ಲಿ ಬೆಟ್ಟಿಂಗ್ ಕಾನೂನುಬದ್ಧಗೊಳಿಸಬೇಕು ಎಂಬ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಸದಸ್ಯ ನಿಲೇಶ್ ಶಾ ಸಲಹೆಗೆ ಪ್ರತಿಕ್ರಿಯಿಸಿದ ಠಾಕೂರ್, ಜಗತ್ತಿನ ಅನೇಕ ದೇಶಗಳಲ್ಲಿ ಕ್ರೀಡೆಗಳ ಮೇಲೆ ನಡೆಯುವ ಬೆಟ್ಟಿಂಗ್ ಕಾನೂನುಬದ್ಧವಾಗಿದೆ.ಹೀಗಾಗಿ ನಮ್ಮ ದೇಶದಲ್ಲಿ ಬೆಟ್ಟಿಂಗ್ ಕಾನೂನುಬದ್ಧಗೊಳಿಸುವುದರಿಂದ ಮ್ಯಾಚ್ ಫಿಕ್ಸಿಂಗ್ ನಿಯಂತ್ರಿಸಬಹುದು ಎಂದಿದ್ದಾರೆ.

ಬೆಟ್ಟಿಂಗ್ ಕಾನೂನುಬದ್ಧಗೊಳಿಸುವುದರಿಂದ ಸಾವಿರಾರು ಕೋಟಿ ಆದಾಯ ಸರ್ಕಾರದ ಬೊಕ್ಕಸಕ್ಕೆ ಬರುತ್ತದೆ ಮತ್ತು ಈ ಹಣವನ್ನು ಕ್ರೀಡೆಯ ಅಭಿವೃದ್ಧಿಗೆ ಅಥವಾ ಇತರ ಚಟುವಟಿಕೆಗಳಿಗೆ ಖರ್ಚು ಮಾಡಬಹುದು ಎಂದು ಸಚಿವರು ಹೇಳಿದ್ದಾರೆ.

"ನನ್ನ ಸಲಹೆಯು, ಭೂಗತವಾಗಿರುವ ಬೆಟ್ಟಿಂಗ್ ಮತ್ತು ಜೂಜಿನ ಚಟುವಟಿಕೆಗಳನ್ನು ಕಾನೂನುಬದ್ಧಗೊಳಿಸಬೇಕು" ಎಂದು ನಿಲೇಶ್ ಶಾ ಹೇಳಿದ್ದರು.

SCROLL FOR NEXT