ದೇಶ

ಪಿಒಕೆಯಲ್ಲಿ ಭಾರತೀಯ ಸೇನೆ ಯಾವುದೇ ಕಾರ್ಯಾಚರಣೆ ನಡೆಸಿಲ್ಲ: ಡಿಜಿಎಂಒ ಸ್ಪಷ್ಟನೆ

Srinivasamurthy VN

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಯಾವುದೇ ರೀತಿಯ ಸೇನಾ ಕಾರ್ಯಾಚರಣೆ ನಡೆಸಿಲ್ಲ ಎಂದು ಭಾರತೀಯ ಸೇನೆ ಗುರುವಾರ ರಾತ್ರಿ ಸ್ಫಷ್ಟಪಡಿಸಿದೆ.

ಗುರುವಾರ ಸಂಜೆ ಸುಮಾರು 7 ಗಂಟೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಭಾರತೀಯ ಸೇನೆಯ ಪಿನ್ ಪಾಯಿಂಟ್ ದಾಳಿ ಮಾಡಿದೆ ಎಂದು ಸುದ್ದಿ ದೇಶಾದ್ಯಂತ ಪ್ರಸಾರವಾಗಿತ್ತು. ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾದ ಈ ಸುದ್ದಿ ಬಹುದೊಡ್ಡ ಬ್ರೇಕಿಂಗ್‌ ಸುದ್ದಿ ಎಂದೇ ಅನಿಸಲಾರಂಭಿಸಿತು. ಆದರೆ 10- 15 ನಿಮಿಷಗಳಲ್ಲಿ ದಾಳಿಯ ಸುದ್ದಿಯನ್ನು ಪ್ರಸರಣದಿಂದ ತೆಗೆದು ಹಾಕಲಾಯಿತು. ಸುಮಾರು ಅರ್ಧ ಗಂಟೆಯ ಅನಂತರ, ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಸಂಜೆಯ ವೇಳೆ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಸೇನೆಯು ಹೇಳಿಕೆ ನೀಡಿದೆ. ಜತೆಗೆ ಪಿಒಕೆ ಕ್ರಾಸಿಂಗ್ ಎಲ್‌ಒಸಿಯಲ್ಲಿ ಯಾವುದೇ  ಏರ್‌ಸ್ಟ್ರೈಕ್‌ ನಡೆದಿಲ್ಲ ಎಂದು ಸೇನೆ ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಸೇನೆ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಪರಮ್ಜಿತ್ ಸಿಂಗ್ ಅವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಯಾವುದೇ ರೀತಿಯ ಸೇನಾ ಕಾರ್ಯಾಚರಣೆಯಾಗಿಲ್ಲ ಎಂದು ಹೇಳುವ ಮೂಲಕ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯನ್ನು  ತಳ್ಳಿ ಹಾಕಿದರು.

ವಾಸ್ತವವಾಗಿ, ಈ ತಪ್ಪಿಗೆ ಕಾರಣ ಸಂಜೆ ಏಳು ಗಂಟೆಗೆ ಬಂದ ವರದಿ ಕಾರಣವಾಗಿದೆ. ಪಿಒಕೆಯಲ್ಲಿ ನೀಡಲಾದ ಸೇನೆಯ ಪಿನ್‌ಪಾಯಿಂಟ್ ಸ್ಟ್ರೈಕ್ ಅನ್ನು ಸೂಚಿಸುತ್ತದೆ. ಈ ಸೇನಾ ಕಾರ್ಯಾಚರಣೆಗಳು ಕೆಲವು ದಿನಗಳಿಂದ ನಡೆಯುತ್ತಿವೆ. ಅನೇಕ ಸ್ಥಳಗಳಲ್ಲಿ ಈ ಪಿನ್‌ಪಾಯಿಂಟ್ ಕಾರ್ಯಾಚರಣೆಯನ್ನು ಏರ್‌ಸ್ಟ್ರೈಕ್  ಎಂದು ಸುದ್ದಿಯಲ್ಲಿ ಕರೆಯಲಾಯಿತು. ಸೇನೆಯು ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳನ್ನು ನಾಶಪಡಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. 

SCROLL FOR NEXT