ದೇಶ

ಕೊರೋನಾ, 2 ನೇ ವಿಶ್ವಯುದ್ಧದ ಬಳಿಕ ಜಗತ್ತು ಎದುರಿಸುತ್ತಿರುವ ದೊಡ್ಡ ಸವಾಲು: ಜಿ-20ಯಲ್ಲಿ ಮೋದಿ ಮಾತು

Srinivas Rao BV

ನವದೆಹಲಿ: ಎರಡನೇ ವಿಶ್ವಯುದ್ಧದ ಬಳಿಕ, ಕೋವಿಡ್-19 ಸಾಂಕ್ರಾಮಿಕ ಜಗತ್ತು ಎದುರಿಸುತ್ತಿರುವ ಅತಿ ದೊಡ್ಡ ಸವಾಲಾಗಿದ್ದು, ಮಾನವ ಇತಿಹಾಸದಲ್ಲಿ ಮಹತ್ವದ ತಿರುವು ಎಂದು ಪ್ರಧಾನಿ ನರೇಂದ್ರ ಮೋದಿ ವರ್ಚ್ಯುಯಲ್ ಜಿ-20 ಶೃಂಗಸಭೆಯಲ್ಲಿ ಹೇಳಿದ್ದಾರೆ. 

ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದ ಐಟಿ ಸಾಮರ್ಥ್ಯದ ಬಗ್ಗೆ ಗಮನ ಸೆಳೆದಿದ್ದು, ಕೋವಿಡ್ ನಂತರದ ಪರಿಸ್ಥಿತಿಗಳು ವರ್ಕ್ ಫ್ರಮ್ ಎನಿವೇರ್ ಪರಿಕಲ್ಪನೆಯನ್ನು ಸಾಮಾನ್ಯಗೊಳಿಸಿದೆ ಎಂದು ಹೇಳಿದ್ದು, ವರ್ಚ್ಯುಯಲ್ ಜಿ-20 ಸೆಕ್ರೆಟರಿಯಟ್ ಸ್ಥಾಪನೆಗೂ ಸಲಹೆ ನೀಡಿದ್ದಾರೆ.

ಇದೇ ವೇಳೆ ಕೊರೋನೋತ್ತರ ಜಗತ್ತಿಗಾಗಿ ಹೊಸ ಗ್ಲೋಬಲ್ ಇಂಡೆಕ್ಸ್ ನ್ನು ಅಭಿವೃದ್ಧಿಪಡಿಸುವುದಕ್ಕೂ ಮೋದಿ ಸಲಹೆ ನೀಡಿದ್ದು, ವ್ಯಾಪಕ ಪ್ರತಿಭೆಗಳ ಸೃಷ್ಟಿ, ಸಮಾಜದ ಎಲ್ಲಾ ಭಾಗಗಳಿಗೂ ತಂತ್ರಜ್ಞಾನ ತಲುಪುವಂತೆ ಮಾಡುವುದು ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಭೂಮಿ ತಾಯಿಯೆಡೆಗೆ ವಿಶ್ವಸ್ತ ರೀತಿಯಲ್ಲಿರುವುದನ್ನೊಳಗೊಂಡ ಅಂಶಗಳು ಇರಬೇಕು ಎಂದು ಮೋದಿ ಹೇಳಿದ್ದು, ಇವುಗಳ ಆಧಾರದಲ್ಲಿ ಹೊಸ ಜಗತ್ತಿಗೆ ಜಿ-20 ಅಡಿಪಾಯ ಹಾಕಬಹುದೆಂದು ಹೇಳಿದ್ದಾರೆ. 

ಸೌದಿ ಅರೇಬಿಯಾದ ರಾಜ ಸಲ್ಮಾನ್ ಜಿ-20 ಶೃಂಗಸಭೆಗೆ ಚಾಲನೆ ನೀಡಿದರು. ಭಾರತ 2022 ರ ಜಿ-20 ಶೃಂಗಸಭೆಯನ್ನು ಆಯೋಜಿಸಲು ನಿಗದಿಯಾಗಿದೆ
 

SCROLL FOR NEXT