ದೇಶ

ದೇಶಗಳ ಸಾಮೂಹಿಕ ಪ್ರಯತ್ನದಿಂದ ಕೋವಿಡ್-19 ಸಮಸ್ಯೆಗಳಿಂದ ಹೊರಬರಬಹುದು: ಪ್ರಧಾನಿ ನರೇಂದ್ರ ಮೋದಿ 

Sumana Upadhyaya

ನವದೆಹಲಿ: ಈಗಷ್ಟೇ ಜಿ20 ರಾಷ್ಟ್ರಗಳ ನಾಯಕರೊಂದಿಗೆ ಫಲಪ್ರದ ಮಾತುಕತೆ ನಡೆಸಿದ್ದೇನೆ. ಕೋವಿಡ್-19 ನಂತರ ಉಂಟಾಗಿರುವ ಆರ್ಥಿಕ ಕುಸಿತದಿಂದ ಹೊರಬರಲು ವಿಶ್ವದ ಬೃಹತ್ ಆರ್ಥಿಕ ರಾಷ್ಟ್ರಗಳು ಸಾಮೂಹಿಕ ಪ್ರಯತ್ನ ನಡೆಸಿದರೆ ಖಂಡಿತಾ ಸಾಧ್ಯವಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಸೌದಿ ಅರೇಬಿಯಾ ಆಯೋಜಿಸಿದ್ದ ಜಿ20 ವರ್ಚುವಲ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಜಿ 20 ಶೃಂಗಸಭೆ ಸುಗಮವಾಗಿ ಸಾಗಲು ನಾವು ಡಿಜಿಟಲ್ ಸೌಲಭ್ಯವನ್ನು ಭಾರತದ ಐಟಿ ತಂತ್ರಜ್ಞಾನಗಳ ಮೂಲಕ ಒದಗಿಸಿದ್ದೇವೆ. ಕೋವಿಡ್-19 ಸಾಂಕ್ರಾಮಿಕ ಸಂಕಷ್ಟದಿಂದ ಹೊರಬರಲು ಆತ್ಮವಿಶ್ವಾಸದಿಂದ ಸಾಮೂಹಿಕ ಪ್ರಯತ್ನ ನಡೆಸಬೇಕು. ಇದರಿಂದ ನಮ್ಮ ಸಮಾಜಕ್ಕೆ ಕೂಡ ಸ್ಫೂರ್ತಿ ದೊರಕುತ್ತದೆ. ಭೂಮಿಯ ಮೇಲೆ ಬಲವಾದ ನಂಬಿಕೆ ಆರೋಗ್ಯಕರ ಮತ್ತು ಸುಖಜೀವನ ನಡೆಸಲು ಸಾಧ್ಯವಿದೆ ಎಂದಿದ್ದಾರೆ.

ಬಹು ಕೌಶಲ್ಯ ಮತ್ತು ಮರು ಕೌಶಲ್ಯ ಪ್ರತಿಭೆಯನ್ನು ಬೆಳೆಸಿ ಮನುಷ್ಯನಲ್ಲಿ ಘನತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ. ಹೊಸ ತಂತ್ರಜ್ಞಾನಗಳು ಮನುಷ್ಯನಿಗೆ ನೆರವಾಗಬೇಕು. ಆಗ ಮಾತ್ರ ಉಪಯೋಗವಾಗುತ್ತದೆ ಎಂದರು.

ಜಿ20 ಶೃಂಗಸಭೆಯ ಆಯೋಜನೆ ಹೊಂದಿದ್ದ ಸೌದಿ ಅರೇಬಿಯಾ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ತಮ್ಮ ಆರಂಭಿಕ ಮಾತುಗಳಲ್ಲಿ, ಕೋವಿಡ್-19 ವಿರುದ್ಧ ಹೋರಾಡಲು ಸುಲಭವಾಗಿ ಕೈಗೆಟಕುವ ದರದಲ್ಲಿ ಲಸಿಕೆಗಳು ಸೇರಿದಂತೆ ಔಷಧಗಳು ಸಿಗುವಂತಾಗಬೇಕು. 

ಕೋವಿಡ್ -19 ಗಾಗಿ ಲಸಿಕೆಗಳು, ಚಿಕಿತ್ಸಕ ಮತ್ತು ರೋಗನಿರ್ಣಯ ಸಾಧನಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಗತಿಯ ಬಗ್ಗೆ ನಾವು ಆಶಾವಾದಿಗಳಾಗಿದ್ದರೂ, ಎಲ್ಲಾ ಜನರಿಗೆ ಈ ಸಾಧನಗಳು ಕೈಗೆಟುಕುವ ದರದಲ್ಲಿ ಸಿಗುವಂತಾಗಬೇಕು ಎಂದು ಆಶಿಸಿದರು.

SCROLL FOR NEXT