ದೇಶ

ಚತ್ತೀಸ್ ಗಢ: ಶರಣಾದ 121 ಮಾವೋಗಳು ಪೊಲೀಸರಾಗಿ ನೇಮಕ, ಶೀಘ್ರದಲ್ಲೇ ನಕ್ಸಲ್ ಕಾರ್ಯಾಚರಣೆಗೆ ಸೇರ್ಪಡೆ

Lingaraj Badiger

ರಾಯಪುರ: ಸದಾ ಪೊಲೀಸರ ವಿರುದ್ಧ ಹೋರಾಟುತ್ತಿದ್ದ 121 ಮಾವೋವಾದಿಗಳು ಈಗ ಸ್ವತಃ ಪೊಲೀಸರಾಗಿ ನೇಮಕಗೊಂಡಿದ್ದು, ಶೀಘ್ರದಲ್ಲೇ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ.

ದಕ್ಷಿಣ ಛತ್ತೀಸ್‌ಗಢದ ಬಸ್ತರ್ ಪೊಲೀಸರು ಈ ಮಹತ್ವದ ಸಾಧನೆ ಮಾಡಿದ್ದು, ನಕ್ಸಲ್ ಪೀಡಿತ ವಿವಿಧ ಜಿಲ್ಲೆಗಳಲ್ಲಿ ಶರಣಾದ 121 ಮಾವೋವಾದಿ ಕಾರ್ಯಕರ್ತರು ಮಂಗಳಾರ ಜಗದಾಲ್‌ಪುರ ಪೊಲೀಸ್ ತರಬೇತಿ ಶಾಲೆಯಲ್ಲಿ ಕಾನ್‌ಸ್ಟೆಬಲ್‌ಗಳಾಗಿ ಹೊರನಡೆದರು.

ಇಂದು ಪಾಸಿಂಗ್- ಹೌಟ್ ಪೆರೇಡ್ ನಲ್ಲಿ ಭಾಗವಹಿಸಿದ್ದ 227 ಪೊಲೀಸ್ ಪೇದೆಗಳಲ್ಲಿ 121 ಮಾಜಿ ಮಾವೋವಾದಿಗಳು ಸೇರಿದ್ದಾರೆ.

11 ತಿಂಗಳ ಕಠಿಣ ತರಬೇತಿ ಕೋರ್ಸ್‌ಗೆ ಸೇರುವ ಮೊದಲು ಅನಕ್ಷರಸ್ಥರಾಗಿದ್ದ ಮಾಜಿ ಮಾವೋವಾದಿಗಳಲ್ಲಿ 117 ಮಂದಿ ಓದುವ ಮತ್ತು ಬರೆಯುವ ಸಾಮರ್ಥ್ಯವನ್ನು ಬೆಳೆಸಿಕೊಂಡಿರುವುದು ಮತ್ತೊಂದು ಸಾಧನೆಯಾಗಿದೆ.

"ಬಸ್ತಾರ್ ಪೊಲೀಸರು ಬುಡಕಟ್ಟು ಗ್ರಾಮಸ್ಥರ ಬೆಂಬಲ ಪಡೆಯುವ ಮೂಲಕ ನೂರಾರು ನಕ್ಸಲರನ್ನು ಮುಖ್ಯವಾಹಿನಿಗೆ ಕರೆತಂದು ಅವರಲ್ಲಿ ವಿಶ್ವಾಸ ಮೂಡಿಸಿದ್ದಾರೆ. ತರಬೇತಿ ಪಡೆದ ಕಾನ್‌ಸ್ಟೆಬಲ್‌ಗಳು ಈಗ ಈ ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವ ನಮ್ಮ ಧ್ಯೇಯದ ಭಾಗವಾಗಲಿದ್ದಾರೆ” ಎಂದು ಹೊಸದಾಗಿ ನೇಮಕಗೊಂಡ ಪೊಲೀಸರನ್ನು ಅಭಿನಂದಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್(ಬಸ್ತರ್ ಶ್ರೇಣಿ) ಸುಂದರರಾಜ್ ಪಿ ಅವರು ಹೇಳಿದ್ದಾರೆ.

SCROLL FOR NEXT