ದೇಶ

ವಿವಾದಾತ್ಮಕ ಪೊಲೀಸ್ ಕಾಯ್ದೆಯನ್ನು ಹಿಂಪಡೆದ ಕೇರಳ ಸರ್ಕಾರ 

Srinivas Rao BV

ತಿರುವನಂತಪುರಂ: ಸಾಕಷ್ಟು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ವಿವಾದಾತ್ಮಕ ಪೊಲೀಸ್ ಕಾಯ್ದೆಯನ್ನು ಹಿಂಪಡೆದಿದೆ.

ಕೇರಳ ಪೊಲೀಸ್ ಕಾಯ್ದೆ 118 ಎಯನ್ನು ಹಿಂಪಡೆಯುವುದಕ್ಕೆ ಕೇರಳ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಕಾಯ್ದೆಯನ್ನು ಅನೂರ್ಜಿತಗೊಳಿಸಲು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.  
 
118ಎ ಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಕೇರಳ ಹೈಕೋರ್ಟ್ ನಾಳೆಗೆ ಮುಂದೂಡಿದೆ. 

ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್, ರೆವೆಲ್ಯೂಷನರಿ ಸೋಷಿಯಲಿಸ್ಟ್ ಪಕ್ಷ ಎಂಪಿಎನ್ ಕೆ ಪ್ರೇಮ ಚಂದ್ರನ್, ಆರ್ ಎಸ್ ಪಿ ನಾಯಕರಾದ ಶಿಬು ಬೇಬಿ ಜಾನ್ ಹಾಗೂ ಎಎ ಅಜೀಜ್ ಕಾಯ್ದೆಯನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು.

ಯಾವುದೇ ಮಾಧ್ಯಮದಲ್ಲೂ ವ್ಯಕ್ತಿಗಳಿಗೆ ಯಾವುದೇ ಕಂಟೆಂಟ್ ಮೂಲಕ ನೋವುಂಟುಮಾಡಿದರೆ ಬೆದರಿಸಿದನ್ನು ತಡೆಗಟ್ಟಲು ಈ ಕಾನೂನು ಜಾರಿಗೆ ತರಲು ಉದ್ದೇಶಿಸಲಾಗಿತ್ತು. ಈ ಕಾನೂನಿನ ಪ್ರಕಾರ ಆರೋಪ ಸಾಬೀತಾದರೆ 10 ಸಾವಿರ ರೂಪಾಯಿ ದಂಡ, 3 ವರ್ಷಗಳ ಜೈಲು ಅಥವಾ ಎರಡನ್ನೂ ವಿಧಿಸಬಹುದಾಗಿತ್ತು.

SCROLL FOR NEXT