ದೇಶ

ಬಿಜೆಪಿ 'ಬ್ಲಫ್ ಜುಮ್ಲಾ ಪಾರ್ಟಿ', ಶ್ರೀಮಂತರಿಗೆ ದೇಶ ಮಾರಾಟ ಮಾಡುತ್ತಿದೆ: ಕೆಟಿಆರ್ ಕಿಡಿ

Lingaraj Badiger

ಹೈದರಾಬಾದ್: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ತೆಲಂಗಾಣ ಸರ್ಕಾರದ ವಿರುದ್ಧ ಸಲ್ಲಿಸಿದ್ದ 'ಚಾರ್ಜ್‌ಶೀಟ್' ಅನ್ನು ಖಂಡಿಸಿದ, ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರು, ಬಿಜೆಪಿ 'ಬ್ಲಫ್ ಜುಮ್ಲಾ ಪಾರ್ಟಿ'ಯಾಗಿದ್ದು, ಅವರು ತಮ್ಮ ಸ್ನೇಹಿತರಾದ ಅದಾನಿ ಮತ್ತು ಅಂಬಾನಿಗಳಿಗೆ ಎಲ್ಲವನ್ನು ಮಾರಾಟ ಮಾಡಲು ಯೋಜಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ "ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ, ಭಾರತೀಯ ರೈಲ್ವೆ ಮತ್ತು ಜೀವ ವಿಮಾ ನಿಗಮ(ಎಲ್ಐಸಿ)ಗಳನ್ನು ಮಾರಾಟ ಮಾಡಲು ಯೋಜಿಸುತ್ತಿದೆ" ಎಂದು ರಾಮರಾವ್ ಹೇಳಿದ್ದಾರೆ.

ಅವಕಾಶ ಸಿಕ್ಕರೆ, ಗೋಲ್ಕೊಂಡ ಕೋಟೆ ಮತ್ತು ಚಾರ್ಮಿನಾರ್ ಅನ್ನು ಸಹ ಮಾರಾಟ ಮಾಡಲು ಅವರಿಗೆ ಯಾವುದೇ ಹಿಂಜರಿಕೆ ಇಲ್ಲ. ಬಿಜೆಪಿ ವಾಟ್ಸ್‌ಆ್ಯಪ್‌ನಲ್ಲಿ ತಪ್ಪು ಮಾಹಿತಿ ಹರಡುವ ಮೂಲಕ ಜನರನ್ನು ಧರ್ಮದ ಹೆಸರಿನಲ್ಲಿ ವಿಭಜಿಸುತ್ತಿದೆ. ಚಾರ್ಜ್‌ಶೀಟ್ ಗೋಬೆಲ್ಸ್ ಅವರ ಪ್ರಚಾರದ ದಿನಚರಿಯನ್ನು ಹೋಲುತ್ತದೆ "ಎಂದು ವಾಗ್ದಾಳಿ ನಡೆಸಿದರು.

ನಾವು ಕೇಂದ್ರ ಸರ್ಕಾರಕ್ಕೆ 1 ರೂ. ನೀಡಿದರೆ, ಅವರು ನಮಗೆ 50 ಪೈಸೆ ವಾಪಸ್ ಕೊಡುತ್ತಾರೆ. ಪ್ರತಿ ವರ್ಷ ರಾಜ್ಯ ಸರ್ಕಾರ ಕೇಂದ್ರಕ್ಕೆ ಸುಮಾರು 2 ಕೋಟಿ ರೂ. ಪಾವತಿಸಿದರೆ, ಅವರು ನಮಗೆ 1 ಕೋಟಿ ರೂ. ವಾಪಸ್ ಕೊಡುತ್ತಾರೆ. "ಐಐಎಂ, ಐಐಐಟಿ(ಕರೀಂನಗರ), ಎನ್ಐಟಿ ಅಥವಾ ಬುಡಕಟ್ಟು ವಿಶ್ವವಿದ್ಯಾಲಯ ಎಲ್ಲಿದೆ? ಬಿಜೆಪಿ ನೀಡಿದ ಭರವಸೆ ಏನಾಯಿತು?. ಉದ್ಯೋಗಾವಕಾಶಗಳನ್ನು ಹೆಚ್ಚಿಸಬಹುದಾದ ಮತ್ತು ಹೈದರಾಬಾದ್ ಮಂಜೂರು ಮಾಡಬಹುದಾದ ಮಾಹಿತಿ ತಂತ್ರಜ್ಞಾನ ಹೂಡಿಕೆ ಪ್ರದೇಶ(ಐಟಿಐಆರ್) ಯೋಜನೆ ಕೂಡ ಬಿಜೆಪಿಯಿಂದ ರದ್ದುಗೊಂಡಿದೆ" ಎಂದು ಕೆಟಿಆರ್ ಆಕ್ರೋಶ ವ್ಯಕ್ತಪಡಿಸಿದರು.

SCROLL FOR NEXT