ದೇಶ

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಆರ್ ಬಿಐ ಸಲಹೆ: ಇದು 'ಸೂಟು ಬೂಟಿನ ಸರ್ಕಾರ' ಎಂದು ರಾಹುಲ್ ಟೀಕೆ

Lingaraj Badiger

ನವದೆಹಲಿ: ಕೇಂದ್ರ ಸರ್ಕಾರದ 'ಸೂಟುಬೂಟಿನ ಸರ್ಕಾರದ'ದ ವಿರುದ್ಧ ಮತ್ತೊಮ್ಮೆ ಕಿಡಿಕಾರಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಸರ್ಕಾರ ನಿಧಾನವಾಗಿ ವ್ಯವಸ್ಥಿತ ವಿಧಾನದಲ್ಲಿ ಉದ್ಯಮಿಗಳ ಹಿತಾಸಕ್ತಿ ಕಾಪಾಡಲು ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, "ಕ್ರಮಾಂಕವನ್ನು ಅರ್ಥ ಮಾಡಿಕೊಳ್ಳಿ. ಮೊದಲು ಕೆಲ ದೊಡ್ಡ ಕಂಪನಿಗಳ ಸಾಲ ಮನ್ನಾ, ನಂತರ ಕಂಪನಿಗಳಿಗೆ ದೊಡ್ಡ ಮಟ್ಟದ ತೆರಿಗೆ ವಿನಾಯತಿ. ಈಗ ಈ ಕಂಪನಿಗಳು ಆರಂಭಿಸಿರುವ ಬ್ಯಾಂಕ್‌ಗಳಿಗೆ ಜನರ ಉಳಿತಾಯವನ್ನು ನೇರವಾಗಿ ನೀಡಲು ಮುಂದಾಗಿದೆ" ಎಂದು ಆರೋಪಿಸಿದ್ದಾರೆ. ಇದಕ್ಕೆ ಅವರು "ಸೂಟುಬೂಟಿನ ಸರ್ಕಾರ" ಎಂದು ಹ್ಯಾಷ್‌ಟ್ಯಾಗ್‌ ಬಳಸಿದ್ದಾರೆ.

ಇದರೊಂದಿಗೆ ಅವರು ಮಾಜಿ ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌ ಮತ್ತು ಪ್ರಸಿದ್ಧ ಆರ್ಥಿಕ ತಜ್ಞ ವೈರಲ್‌ ಆಚಾರ್ಯ ಅವರು, ಭಾರತೀಯ ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಸಲಹೆ ನೀಡಿರುವುದು ತಪ್ಪು ಎಂದಿರುವ ವರದಿಯನ್ನು ಉಲ್ಲೇಖಿಸಿದ್ದಾರೆ.

SCROLL FOR NEXT