ನಿತೀಶ್ ಕುಮಾರ್ 
ದೇಶ

ನಿತೀಶ್ ಮತ್ತೆ ಸಿಎಂ ಆಗಿದ್ದಕ್ಕೆ ದೇವರಿಗೆ ತನ್ನ ಬೆರಳನ್ನೆ ಅರ್ಪಿಸಿ ಹರಕೆ ತೀರಿಸಿದ ಅಭಿಮಾನಿ!

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ಹೊಂದಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯೋರ್ವ 45 ವರ್ಷದ ಅನಿಲ್ ಶರ್ಮಾ ಅಲಿಯಾಸ್ ಅಲಿ ಬಾಬಾ ಎಂಬಾತ ತನ್ನ ಕೈ ಬೆರಳನ್ನೇ ದೇವರಿಗೆ ಸಮರ್ಪಿಸಿದ್ದಾನೆ.

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ಹೊಂದಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯೋರ್ವ 45 ವರ್ಷದ ಅನಿಲ್ ಶರ್ಮಾ ಅಲಿಯಾಸ್ ಅಲಿ ಬಾಬಾ ಎಂಬಾತ ತನ್ನ ಕೈ ಬೆರಳನ್ನೇ ದೇವರಿಗೆ ಸಮರ್ಪಿಸಿದ್ದಾನೆ.

ಅನಿಲ್ ಶರ್ಮಾ ನಿತೀಶ್ ಕುಮಾರ್ ಅವರ ಜಾತಿ-ಕುರ್ಮಿಗೆ ಸೇರಿದವರಲ್ಲ, ಬಿಹಾರದ ಜೆಹಾನಾಬಾದ್ ಜಿಲ್ಲೆಯ ಘೋಶಿ ಪಿಎಸ್ ಅಡಿಯಲ್ಲಿ ವೈನಾ ಗ್ರಾಮದ ಮೇಲ್ಜಾತಿಯ ಭೂಮಿಹಾರ್‌ಗೆ ಸೇರಿದವರು. ಆದರೆ ಕೆಲವು ಕಾರಣಗಳಿಂದಾಗಿ ಅವರು ನಿತೀಶ್ ಕುಮಾರ್ ಅವರನ್ನು ರಾಜ್ಯದ ಸಿಎಂ ಆಗಿ ನೋಡಬೇಕು ಎಂದು ದೇವರಲ್ಲಿ ಹರಿಕೆ ಹೊತ್ತಿದ್ದು ಇದೀಗ ನಿತೀಶ್ ಸಿಎಂ ಆಗಿದ್ದಕ್ಕೆ ಹರಕೆ ಅರ್ಪಿಸಿದ್ದಾರೆ.

ಅಲ್ಲದೆ ನಿತೀಶ್ ಅವರ ಅಭಿಯಾನಕ್ಕೆ ಧನಸಹಾಯಕ್ಕಾಗಿ ತಮ್ಮ ಮನೆಯ ಕೆಲವು ಆಸ್ತಿಯನ್ನು ಸಹ ಮಾರಾಟ ಮಾಡಿದ ರೈತ ಎಂದು ತಿಳಿದುಬಂದಿದೆ. 

ನವೆಂಬರ್ 16 ರಂದು, ನಿತೀಶ್ ಮತ್ತೆ ಮುಖ್ಯಮಂತ್ರಿಯವರ ಪ್ರಮಾಣವಚನ ಸ್ವೀಕರಿಸಿದ ದಿನ, ಶರ್ಮಾ ತನ್ನ ಎಡಗೈಯಿಂದ ಬೆರಳನ್ನು ಕತ್ತರಿಸಿ ಗ್ರಾಮದೇವತೆ-ಗೌರಿಯಾ ಬಾಬಾಗೆ ಅರ್ಪಣೆಯಾಗಿ ಅರ್ಪಿಸಿದನು.

ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುವ ಸಂತೋಷದಲ್ಲಿ ನನ್ನ ಸಂತೋಷವನ್ನು ವ್ಯಕ್ತಪಡಿಸುತ್ತೇನೆ ಎಂದು ಶರ್ಮಾ, ಗಾಂಜಿ ಮತ್ತು ಲುಂಗಿ ಧರಿಸಿ, ಅಪೂರ್ಣ ಮನೆಯಲ್ಲಿ ಕುಳಿತು ಮಾಧ್ಯಮಗಳಿಗೆ ಹೆಮ್ಮೆಯಿಂದ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT