ದೇಶ

'ನಿವಾರ್' ಮಧ್ಯಂತರ ಪರಿಹಾರಕ್ಕಾಗಿ ಕೇಂದ್ರದಿಂದ 50 ಕೋಟಿ ರೂ. ಕೇಳಿದ ಪುದುಚೆರಿ ಸರ್ಕಾರ

Srinivas Rao BV

ಪುದುಚೆರಿ: ನಿವಾರ್ ಚಂಡಮಾರುತದಿಂದ ಉಂಟಾಗಿರುವ ಹಾನಿ ಹಾಗೂ ಅವುಗಳನ್ನು ಸರಿಪಡಿಸುವುದಕ್ಕಾಗಿ ಪುದುಚೆರಿ ಸರ್ಕಾರ ಕೇಂದ್ರ ಸರ್ಕಾರದಿಂದ 50 ರೂಪಾಯಿ ಮಧ್ಯಂತರ ಪರಿಹಾರ ನಿಧಿಗೆ ಮನವಿ ಮಾಡುವ ಸಾಧ್ಯತೆ ಇದೆ.

ಈ ಬಗ್ಗೆ ಸಿಎಂ ವಿ ನಾರಾಯಣ ಸ್ವಾಮಿ ಮಾಹಿತಿ ನೀಡಿದ್ದು, ಹಾನಿಯ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತಿದೆ. ಅಂದಾಜು 400 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿರಬಹುದು ಎಂದು ನಾರಾಯಣಸ್ವಾಮಿ ತಿಳಿಸಿದ್ದಾರೆ.

ಆರಂಭಿಕ ಅಂದಾಜಿನಲ್ಲಿ 820 ಹೆಕ್ಟೇರ್ ಗಳಷ್ಟು ಪ್ರದೇಶದಲ್ಲಿ ಬೆಳೆದಿದ್ದ ಭತ್ತ, 700 ಹೆಕ್ಟೇರ್ ಗಳಷ್ಟು ಪ್ರದೇಶದಲ್ಲಿ ಬೆಳೆದಿದ್ದ ತರಕಾರಿಗಳು, 170 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು, 55 ಹೆಕ್ಟೇರ್ ಗಳಷ್ಟು ಪ್ರದೇಶದ್ಲಲಿ ಬೆಳೆದಿದ್ದ ಬಾಳೆ ಹಾಗೂ 7 ಹೆಕ್ಟೇರ್ ಗಳಷ್ಟು ಪ್ರದೇಶದಲ್ಲಿ ಬೆಳೆದಿದ್ದ ವೀಳ್ಯದ ಎಲೆಗಳ ಫಸಲು ನಾಶವಾಗಿರುವುದಷ್ಟೇ ಅಲ್ಲದೇ ರಸ್ತೆಗಳು, ಮೀನುಗಾರಿಕಾ ಬೋಟ್ ಗಳೂ ಸಹ ನಷ್ಟವಾಗಿದೆ.

ಜಲಾವೃತಗೊಂಡ ಪ್ರದೇಶದಿಂದ ಶೇ.95 ರಷ್ಟು ನೀರನ್ನು ಹೊರಹಾಕಲಾಗಿದೆ. ವಿದ್ಯುತ್ ಕಡಿತಗೊಂಡಿದ್ದ ಪ್ರದೇಶಗಳ ಪೈಕಿ ಶೇ.90 ಭಾಗಗಳಲ್ಲಿ ವಿದ್ಯುತ್ ಪೂರೈಕೆ ಪುನಾರಂಭಗೊಂಡಿದೆ ಎಂದು ಸಿಎಂ ತಿಳಿಸಿದ್ದಾರೆ.
 

SCROLL FOR NEXT