ದೇಶ

ಕಳೆದೆರಡು ದಿನಗಳಿಂದ ನನಗೆ ಮತ್ತೆ ಗೃಹಬಂಧನ: ಮೆಹಬೂಬಾ ಮುಫ್ತಿ ಆರೋಪ

Srinivasamurthy VN

ಶ್ರೀನಗರ: ವಿಧಿ 370ರ ರದ್ಧತಿ ಬೆನ್ನಲ್ಲೇ ಗೃಹ ಬಂಧನಕ್ಕೀಡಾಗಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಪಿಡಿಪಿ ಮುಖ್ಯಸ್ಥೆ ಹಾಗೂ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರನ್ನು ಮತ್ತೆ ವಿಚಾರಣೆಗೊಳಪಡಿಸಲಾಗಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಸ್ವತಃ ಮೆಹಬೂಬಾ ಮುಫ್ತಿ ಅವರೇ ಹೇಳಿಕೊಂಡಿದ್ದು, ಈ ಕುರಿತಂತೆ ಟ್ವೀಟ್ ಮಾಡಿದ್ದು, ಕಳೆದ ಎರಡು ದಿನಗಳಿಂದ ನನ್ನ ಕುಟುಂಬವನ್ನು ಮತ್ತೆ ಅಕ್ರಮವಾಗಿ ವಿಚಾರಣೆಗೊಳಪಡಿಸಲಾಗುತ್ತಿದೆ. ಅಂತೆಯೇ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಪುಲ್ವಾಮದಲ್ಲಿರುವ ತಮ್ಮ ಪಕ್ಷದ  ನಾಯಕ ವಾಹೀದ್ ಉರ್ ರೆಹಮಾನ್ ಅವರ ಕುಟುಂಬವನ್ನು ಭೇಟಿ ಮಾಡಲು ಬಿಡುತ್ತಿಲ್ಲ. ವಾಹೀದ್ ರನ್ನು ಅನಗತ್ಯವಾಗಿ ಬಂಧಿಸಲಾಗಿದ್ದು, ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗಿದೆ. ಕೇವಲ ನನ್ನನ್ನು ಮಾತ್ರವಲ್ಲ ನನ್ನ ಮಗಳನ್ನು ಕೂಡ ಗೃಹ ಬಂಧನಕ್ಕೀಡು ಮಾಡಲಾಗಿದೆ ಎಂದು ಹೇಳಿದ್ದಾರೆ.

ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ನವೀದ್ ಬಾಬು ಒಳಗೊಂಡ ಭಯೋತ್ಪಾದಕ ಪ್ರಕರಣದಲ್ಲಿ ಸಂಬಂಧ ಹೊಂದಿದ್ದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಬಂಧಿಸಿರುವ ವಹೀದ್ ಪರ್ರಾನನ್ನು ಬಂಧಿಸಿದೆ.

SCROLL FOR NEXT