ದೇಶ

ಕೊರೋನಾ ಲಸಿಕೆ ಉತ್ಪಾದನೆ, ವಿತರಣೆ ಬಗ್ಗೆ ಪರಾಮರ್ಶೆ: 3 ಲಸಿಕಾ ಅಭಿವೃದ್ಧಿ  ಕೇಂದ್ರಗಳಿಗೆ ಇಂದು ಪ್ರಧಾನಿ ಮೋದಿ ಭೇಟಿ

Sumana Upadhyaya

ನವದೆಹಲಿ: ಕೋವಿಡ್-19 ಲಸಿಕೆ ಉತ್ಪಾದನೆ ಮತ್ತು ಅಭಿವೃದ್ಧಿ ಪ್ರಕ್ರಿಯೆಗಳ ಬಗ್ಗೆ ಪರಾಮರ್ಶೆ ನಡೆಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಖುದ್ದಾಗಿ ಶನಿವಾರ 3 ನಗರಗಳಿಗೆ ಭೇಟಿ ನೀಡುತ್ತಿದ್ದಾರೆ.

ಅವರು ಅಹಮದಾಬಾದ್ ನ ಝಿಡಸ್ ಬಯೊಟೆಕ್ ಪಾರ್ಕ್, ಹೈದರಾಬಾದ್ ನ ಭರತ್ ಬಯೋಟೆಕ್ ಮತ್ತು ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಗೆ ಭೇಟಿ ನೀಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.

ನಮ್ಮ ದೇಶದಲ್ಲಿ ಶೇಕಡಾ 70ಕ್ಕೆ ಹತ್ತಿರದಷ್ಟು ಮಂದಿ 10 ವರ್ಷಕ್ಕಿಂತ ಮೇಲ್ಪಟ್ಟವರು ಸಾರ್ಸ್-ಕೋವಿಡ್-2 ಸಾಂಕ್ರಾಮಿಕಕ್ಕೆ ಒಳಗಾಗುತ್ತಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಎರಡನೇ ರಾಷ್ಟ್ರೀಯ ಶೂನ್ಯಸಮೀಕ್ಷೆ ಹೇಳುತ್ತದೆ. ಅಂದರೆ ಕಳೆದ ಆಗಸ್ಟ್ ಹೊತ್ತಿಗೆ 74.3 ಮಿಲಿಯನ್ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಶೇಕಡಾ 10ಕ್ಕಿಂತ ಕಡಿಮೆ ಮಂದಿ ಒಟ್ಟಾರೆ ವೈರಸ್ ಗೆ ಒಳಗಾಗಬಹುದು ಎಂದು ಅಂದಾಜಿಸಲಾಗಿದೆ. 

ಕೊರೋನಾ ಲಸಿಕೆ ಅಧ್ಯಯನ ವೇಳೆ ಪ್ರಮಾಣದಲ್ಲಿ ಪ್ರಮುಖ ತಪ್ಪಾಗಿದೆ ಎಂದು ಅಸ್ಟ್ರಾಝೆನೆಕಾ ಈಗಾಗಲೇ ತಪ್ಪು ಒಪ್ಪಿಕೊಂಡಿರುವುದರ ಮಧ್ಯೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳುವ ಪ್ರಕಾರ, ಶೇಕಡಾ 70 ರಷ್ಟು ಕಡಿಮೆ ಪರಿಣಾಮಕಾರಿತ್ವದಲ್ಲಿದ್ದರೂ ಸಹ, ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಲಸಿಕೆ ವೈರಸ್ ವಿರುದ್ಧ ಕಾರ್ಯಸಾಧ್ಯವಾಗಿದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಕೋವಿಡ್-19 ಲಸಿಕೆ ಉತ್ಪಾದನೆ ಮತ್ತು ವಿತರಣೆಗಳ ಸಾಧ್ಯತೆ ಬಗ್ಗೆ ಪರಾಮರ್ಶೆ ನಡೆಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಗೆ ಭೇಟಿ ನೀಡುತ್ತಿದ್ದಾರೆ. 

SCROLL FOR NEXT