ದೇಶ

ರೈತರನ್ನು ಉಗ್ರರಂತೆ ನೋಡುತ್ತಿರುವುದು ನಿಜಕ್ಕೂ ಅವಮಾನಕರ ಸಂಗತಿ: ಸಂಜಯ್ ರಾವತ್

Manjula VN

ಮುಂಬೈ: ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರವೇಶಿಸದಂತೆ ರೈತರನ್ನು ತಡೆದ ರೀತಿಯು ಅವರು ದೇಶದ ಪ್ರಜೆಗಳೇ ಅಲ್ಲ ರೀತಿ ಕಾಣುತ್ತಿತ್ತು. ರೈತರನ್ನು ಉಗ್ರರಂತೆ ನಡೆಸಿಕೊಳ್ಳಲಾಗುತ್ತಿದೆ. ಇದು ನಿಜಕ್ಕೂ ಅವಮಾನಕರವಾದ ವಿಚಾರವಾಗಿದೆಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಹೇಳಿದ್ದಾರೆ. 

ರೈತರು ಪಂಜಾಬ್ ಹಾಗೂ ಹರಿಯಾಣದಿಂದ ಬಂದವರಾಗಿರುವುದರಿಂದ ಅವರು ಸಿಖ್ಖರಾಗಿದ್ದಾರೆ. ಅಂತಹವರನ್ನು ಖಲಿಸ್ತಾನ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆಂದು ನಾಯಕರೊಬ್ಬರು ಹೇಳಿದ್ದಾರೆ. ಇದು ನಿಜಕ್ಕೂ ರೈತರಿಗೆ ಮಾಡಿದ ಅವಮಾನವಾಗಿದೆ ಎಂದು ಹೇಳಿದ್ದಾರೆ. 

ಇದರಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೂ ಕೂಡ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ರೈತರನ್ನು ಉಗ್ರರೆಂದು ಕರೆಯಲಾಗಿದೆ. ಹೀಗೆ ಕರೆಯುವುದಾದರೆ ರೈತರು ಬೆಳೆಯುವ ಬೆಳೆಗಳನ್ನು ಖರೀದಿ ಮಾಡುವುದನ್ನು ನಿಲ್ಲಿಸಬೇಕೆಂದು ತಿಳಿಸಿದ್ದಾರೆ. 

ರೈತರನ್ನು ಭಯೋತ್ಪಾದಕರೆಂದು ಕರೆಯುವ ಮೂಲಕ ಬಿಜೆಪಿ ರೈತರನ್ನು ಅವಮಾನಿಸಿದೆ. ಇದು ಬಿಜೆಪಿಯವರ ಪಿತೂರಿಯಾಗಿದ್ದು, ಬಿಜೆಪಿ ಸದಾಕಾಲ ಶ್ರೀಮಂತರು, ಉದ್ಯಮಿಗಳಿಗೆ ಬೆಂಬಲ ನೀಡಲು ಬಯಸುತ್ತದೆ. ರೈತರನ್ನು ಭಯೋತ್ಪಾದಕರೆಂದು ಕರೆಯುವ ಬಿಜೆಪಿಯವರು ರೈತರು ಬೆಳೆದ ಉತ್ಪನ್ನಗಳನ್ನು ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದಿದ್ದಾರೆ. 

ಇನ್ನು ಬಿಎಸ್'ಪಿ ಮುಖ್ಯಸ್ಥ ಮಾಯಾವತಿ ಹಾಗೂ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರೂ ಕೂಡ ರೈತ ವಿರೋಧಿ ಕೃಷಿ ಮಸೂದೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. 

SCROLL FOR NEXT