ದೇಶ

ತಿರುಮಲ ಶ್ರೀವಾರಿ ದೇವಾಲಯದಲ್ಲಿ ಟಿಟಿಡಿಯಿಂದ ಸಂಪ್ರದಾಯಗಳ ಉಲ್ಲಂಘನೆ- ಕಾಂಗ್ರೆಸ್ ಆರೋಪ

Nagaraja AB

ತಿರುಪತಿ: ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ವೈಕುಂಠ ದ್ವಾರಕಾ ದರ್ಶನವನ್ನು ಹತ್ತು ದಿನಗಳವರೆಗೆ ನೀಡುವ ನಿರ್ಧಾರವನ್ನು ತಿರುಪತಿ ಕಾಂಗ್ರೆಸ್ ಮುಖಂಡ ನವೀನ್ ಕುಮಾರ್ ರೆಡ್ಡಿ ತೀವ್ರವಾಗಿ ವಿರೋಧಿಸಿದ್ದಾರೆ. ತಿರುಮಲ ದೇಗುಲದ ಸಂಪ್ರದಾಯಗಳನ್ನು ಟಿಟಿಡಿ ಮಂಡಳಿ ಅಧಿಕಾರಿಗಳು ಮುರಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪವಿತ್ರ ವೈಕುಂಠ ಏಕಾದಶಿ ಮತ್ತು ದ್ವಾದಸಿ ದಿನಗಳಲ್ಲಿ (ಡಿಸೆಂಬರ್ 25-26) ಎರಡು ದಿನಗಳ ವೈಕುಂಠ ದ್ವಾರ ದರ್ಶನದ ಹಳೆಯ ಸಂಪ್ರದಾಯವನ್ನು ಉಳಿಸಿಕೊಳ್ಳಬೇಕೆಂದು ರೆಡ್ಡಿ ಟಿಟಿಡಿ ಮಂಡಳಿ ಮತ್ತು ಆಡಳಿತವನ್ನು ಒತ್ತಾಯಿಸಿದ್ದಾರೆ.

ಇತರೆ ವೈಷ್ಣವ ದೇವಾಲಯಗಳಿಗಿಂತ ಭಿನ್ನವಾಗಿ, ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನ ತನ್ನದೇ ಆದ ಸಂಪ್ರದಾಯ ಮತ್ತು ಆಚರಣೆಗಳನ್ನು ಹೊಂದಿದೆ. ಸದ್ಯ ಟಿಟಿಡಿ ಮಂಡಳಿ ಮತ್ತು ಹಿರಿಯ ಅಧಿಕಾರಿಗಳು ನ್ಯಾಯಾಲಯದ ನಿರ್ದೇಶನದ ಹೆಸರಿನಲ್ಲಿ ಸಂಪ್ರದಾಯಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

SCROLL FOR NEXT