ತಿರುಮಲ 
ದೇಶ

ವೈಕುಂಠ ಏಕಾದಶಿ: ಇದೇ ಮೊದಲ ಬಾರಿಗೆ ತಿರುಮಲದಲ್ಲಿ 10 ದಿನ ವೈಕುಂಠ ದ್ವಾರ ತೆರೆಯಲು ತೀರ್ಮಾನ

ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯ ಟ್ರಸ್ಟಿಗಳು ಇದೇ ಮೊದಲ ಬಾರಿಗೆ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದ ವೈಕುಂಠ ದ್ವಾರವನ್ನು ((ಉತ್ತರ ದ್ವಾರ)ಡಿಸೆಂಬರ್ 25ರಿಂದ 10 ದಿನಗಳವರೆಗೆ ತೆರೆಯಲು ನಿರ್ಧರಿಸಿದ್ದಾರೆ. ವೈಕುಂಠ ಏಕಾದಶಿ ನಿಮಿತ್ತ ಈ ಕ್ರಮಕ್ಕೆಟ್ರಸ್ಟ್ ಮುಂದಾಗಿದೆ. ಭಕ್ತರಿಗೆ ಸುಲಭ, ಆರಾಮದಾಯಕ ದರ್ಶನ ಪಡೆಯುವಂತಾಗಲಿ ಎನ್ನುವುದುಇದರ ಉದ್ದೇ

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯ ಟ್ರಸ್ಟಿಗಳು ಇದೇ ಮೊದಲ ಬಾರಿಗೆ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದ ವೈಕುಂಠ ದ್ವಾರವನ್ನು ((ಉತ್ತರ ದ್ವಾರ)ಡಿಸೆಂಬರ್ 25ರಿಂದ 10 ದಿನಗಳವರೆಗೆ ತೆರೆಯಲು ನಿರ್ಧರಿಸಿದ್ದಾರೆ. ವೈಕುಂಠ ಏಕಾದಶಿ ನಿಮಿತ್ತ ಈ ಕ್ರಮಕ್ಕೆಟ್ರಸ್ಟ್ ಮುಂದಾಗಿದೆ. ಭಕ್ತರಿಗೆ ಸುಲಭ, ಆರಾಮದಾಯಕ ದರ್ಶನ ಪಡೆಯುವಂತಾಗಲಿ ಎನ್ನುವುದುಇದರ ಉದ್ದೇಶ. ಕಳೆದ ವರ್ಷದವರೆಗೆ ಉತ್ತರ ದ್ವಾರ ವನ್ನು ವೈಕುಂಠ ಏಕಾದಶಿ ಮತ್ತು ದ್ವಾದಶಿ (ಮಾರನೆ ದಿನ) ಮಾತ್ರವೇ ತೆರೆಯಲಾಗುತ್ತಿತ್ತು.

ತಿರುಮಲದಲ್ಲಿ ವೈಕುಂತ ಏಕಾದಶಿ ಆಚರಣೆಯಲ್ಲಿ ಟಿಟಿಡಿ ಸಂಪ್ರದಾಯವನ್ನು ಅನುಸರಿಸುತ್ತಿಲ್ಲ ಎಂದು ಗುಂಟೂರಿನ ಭಕ್ತ ರಾಘವನ್ ಕೆ ತಲ್ಲಪಾಕಅವರು ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯ ನಂತರ ಆಂಧ್ರಪ್ರದೇಶ ಹೈಕೋರ್ಟ್ ಮಠಾಧಿಪತಿ , ಪೀಠಾಧಿಪತಿ ಮತ್ತು ಅಗಮ ಸಲಹಾ ಮಂಡಳಿ ಸದಸ್ಯರೊಂದಿಗೆ ಸಮಾಲೋಚಿಸಿನಿರ್ಧಾರ ತೆಗೆದುಕೊಳ್ಳುವಂತೆ ಟಿಟಿಡಿಗೆ ಸೂಚಿಸಿದೆ. .

“ಅದರಂತೆ, ಟಿಟಿಡಿ ಟ್ರಸ್ಟ್ ಬೋರ್ಡ್ ಸದಸ್ಯರ ಉಪ ಸಮಿತಿಯನ್ನು ರಚಿಸಿದೆ, ಇದು26 ಪ್ರಮುಖ ಪೀಠಾಧಿಪತಿಗಳನ್ನು ಹನ್ನೊಂದು ತಿಂಗಳ ಅವಧಿಯಲ್ಲಿ ಸಂಪರ್ಕಿಸಿದೆ ಮತ್ತು ವಿವರವಾದ ವರದಿಯನ್ನು ಮಂಡಳಿಗೆ ಸಲ್ಲಿಸಿದೆ.  ಆ ಮೂಲಕ ವೈಕುಂಠ ದ್ವಾರವನ್ನು ದೇಶದ ಇತರೆ ಪ್ರಧಾನ ದೇವಾಲಯಗಳಲ್ಲಿ 10 ದಿನಗಳವರೆಗೆ ತೆರೆಯುವ ಅಭ್ಯಾಸವಿರುವುದರಿಂದ ಅದೇ ಕ್ರಮ ಅಳವಡಿಸಲು ಶಿಫಾರಸು ಮಾಡಲಾಗಿದೆ,. ಈ ವಿಷಯವನ್ನು ಸುದೀರ್ಘವಾಗಿ ಚರ್ಚಿಸಿದ ನಂತರ ಮಂಡಳಿಯು ವೈಕುಂಠ ಏಕಾದಶಿಯ ದಿನಂದಿಂದ ಪ್ರಾರಂಭಿಸಿ 10 ದಿನಗಳ ಕಾಲ ತಿರುಮಲ ದೇವಸ್ಥಾನದಲ್ಲಿ ವೈಕುಂಠ ದ್ವಾರ ತೆರೆಯಲು ನಿರ್ಧರಿಸಿದೆ ”ಎಂದು ಟಿಟಿಡಿ ಅಧ್ಯಕ್ಷರು ಶನಿವಾರ ನಡೆದ ಟಿಟಿಡಿ ಮಂಡಳಿ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಕಲ್ಯಾಣಮಸ್ತು - ಸಾಮೂಹಿಕ ಮುಕ್ತ ವಿವಾಹ ಕಾರ್ಯಕ್ರಮವನ್ನು ಬಡ ದೀನ ವಿವಾಹಾಕಾಂಕ್ಷಿಗಳಿಗೆ ಹೊಸ ಮಾರ್ಗಸೂಚಿಗಳೊಂದಿಗೆ ಪುನಃ ಪರಿಚಯಿಸಲು ಟಿಟಿಡಿ ಮಂಡಳಿಯು ನಿರ್ಧರಿಸಿದೆ ಎಂದು ಅವರು ಹೇಳಿದವೈ.ಎಸ್.ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಈ ಕಾರ್ಯಕ್ರಮವನ್ನು ಪರಿಚಯಿಸಲಾಯಿತು. “ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸಾಮೂಹಿಕ ವಿವಾಹಗಳ ಜೊತೆಗೆ, ಶ್ರೀವಾರಿ ಕಲ್ಯಾಣಂ ಕೂಡ ಅದೇ ದಿನ ಆ ಸ್ಥಳಗಳಲ್ಲಿ ನಡೆಸಲಾಗುವುದು. ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. . ಈ ಯೋಜನೆಯ ಮಾರ್ಗಸೂಚಿಗಳನ್ನು ರೂಪಿಸುವಂತೆ ಧರ್ಮ ಪ್ರಚಾರ ಪರಿಷತ್‌ಗೆ ನಿರ್ದೇಶಿಸಲಾಗಿದೆ, ”ಎಂದು ಸುಬ್ಬಾ ರೆಡ್ಡಿ ಹೇಳಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT