ದೇಶ

ವಿರೋಧಿಗಳನ್ನು ಹಣಿಯಲು ಇಡಿ, ಸಿಬಿಐಗಳನ್ನು ಕಾಶ್ಮೀರ ಗಡಿಗೆ ಕಳುಹಿಸಿ: ಕೇಂದ್ರದ ವಿರುದ್ಧ ಶಿವಸೇನೆ ಟೀಕೆ

Raghavendra Adiga

ಮುಂಬೈ: ವಿರೋಧಿಗಳನ್ನು ಹಿಮ್ಮೆಟ್ಟಿಸಲು ಕೇಂದ್ರವು ಸಿಬಿಐ, ಇಡಿ (ಜಾರಿ ನಿರ್ದೇಶನಾಲಯ)ಗಳನ್ನು ಬಳಸುವುದಾದರೆ ಅವುಗಳನ್ನು ಜಮ್ಮು ಕಾಶ್ಮೀರದ ಗಡಿಗೆ ಕಳಿಸಬೇಕು ಎಂದು ಶಿವಸೇನೆ ಕೇಂದ್ರಕ್ಕೆ ತಿರುಗೇಟು ನೀಡಿದೆ.

ಶಿವಸೇನೆ ತನ್ನ ಮುಖವಾಣಿ "ಸಾಮ್ನಾ"ದಲ್ಲಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸುವ ಭಯೋತ್ಪಾದಕರನ್ನು ನಿಭಾಯಿಸಲು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅನ್ನು "ಗಡಿ"ಗೆ ಗಳುಹಿಸಬೇಕು ಎಂದಿರುಬ ಸೇನೆ ತನ್ನ ಶಾಸಕನೊಬ್ಬರ ಮೇಲೆ ಇಡಿ ದಾಳಿ ನಡೆದ ತರುವಾಯ ಈ ಹೇಳಿಕೆ ನೀಡಿದೆ,

ದೆಹಲಿಯ ಸಮೀಪ ಪ್ರತಿಭಟನಾ ನಿರತರಾದ ರೈತರನ್ನು ಉಗ್ರರೆಂದು ಸಂಬೋಧಿಸಲಾಗುತ್ತಿದೆ. ಎಂದು ಪಕ್ಷವು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿತು, ಉತ್ತರ ಭಾರತದ ಶೀತ ಹವೆಯ ನಡುವೆ ರೈತರ ವಿರುದ್ಧ ಜಲಫಿರಂಗಿ ಬಳಕೆ "ಕ್ರೌರ್ಯದ ಸ್ವರೂಪ" ಎಂದು ಪಕ್ಷ ಅಭಿಪ್ರಾಯಪಟ್ಟಿದೆ. "ಸಾಮ್ನಾ"ಸಂಪಾದಕೀಯದಲ್ಲಿ, ಸೇನೆ ಗುಜರಾತ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೈತ್ಯ ಪ್ರತಿಮೆಯನ್ನು “ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರು ನಿರ್ಮಿಸಿದ್ದಾರೆ” ಎಂದು ಉಲ್ಲೇಖಿಸಿದ್ದಾರೆ, ಆದರೆ ದೇಶದ ಅಪ್ರತಿಮ ನಾಯಕ, ಮೊದಲ ಗೃಹ ಸಚಿವರು ಅನೇಕ ರೈತಪರ ಆಂದೋಲನಗಳಿಗೆ ನಾಯಕರಾಗಿದ್ದರು ಎಂದು ನೆನಪಿಸಿದೆ. "ಭಾರತದ ರೈತರ ಇಂದಿನ ಸ್ಥಿತಿಯನ್ನು ಕಂಡು ಅವರ ಪ್ರತಿಮೆ ಬಹುಷಃ ಅಳುತ್ತಿದೆ" ಲೇಖನದಲ್ಲಿ ಹೇಳಲಾಗಿದೆ,

ಬಿಜೆಪಿಯೇತರ, ವಿರೋಧಪಕ್ಷಗಳ ಆಡಳಿತದ ರಾಜ್ಯ ರಾಜಕಾರಣಿಗಳನ್ನು ಗುರಿಯಾಗಿಸಲು ಕೇಂದ್ರ ಏಜೆನ್ಸಿಗಳನ್ನು ಬಳಸಿದ್ದಕ್ಕಾಗಿ ಕೇಂದ್ರದ ವಿರುದ್ಧ ಕಿಡಿಕಾರಿದ ಶಿವಸೇನೆ "ವಿರೋಧಿಗಳ ಹಿಮ್ಮೆಟ್ಟಿಸಲು ಸರ್ಕಾರ ಸಿಬಿಐನ ಇಡಿ (ಜಾರಿ ನಿರ್ದೇಶನಾಲಯ) ಅನ್ನು ಬಳಸುತ್ತದೆ.ಆದ್ದರಿಂದ ಈ ಏಜೆನ್ಸಿಗಳಿಗೆ ತಮ್ಮ ಶೌರ್ಯವನ್ನು ಸಾಬೀತುಪಡಿಸಲು ಅವಕಾಶ ನೀಡಬೇಕು. ಪ್ರತಿ ಬಾರಿಯೂ ಗುಂಡಿನ ದಾಳಿಯು ಕೆಲಸಕ್ಕೆ ಬರುವುದಿಲ್ಲ ಃಆಗಾಗಿ ಜಮ್ಮು ಕಾಶ್ಮೀರದ ಗಡಿಯಲ್ಲಿ ಉಗ್ರರು ಪ್ರವೇಶಿಸುತ್ತಿರುವಾಗ , ಇಡಿ ಮತ್ತು ಸಿಬಿಐ ಅನ್ನು ಗಡಿಗಳಿಗೆ ಕಳುಹಿಸಬೇಕು. ಬೇರೆ ಆಯ್ಕೆಗಳಿಲ್ಲ… ” ಎಂದಿದೆ.

“ಬಿಜೆಪಿ ಕೇವಲ ದೇಶದ ಪರಿಸರವನ್ನು ಹಾಳು ಮಾಡುತ್ತಿಲ್ಲ ಆದರೆ ನಿರಂಕುಶಾಧಿಕಾರವನ್ನು ಸ್ಥಾಪಿಸುತ್ತಿದೆ. ಖಲಿಸ್ತಾನ್ ವಿಷಯ ಮುಗಿದಿದೆ ಮತ್ತು ಅದಕ್ಕಾಗಿ ಇಂದಿರಾ ಗಾಂಧಿ ಮತ್ತು ಜನರಲ್ ಅರುಣ್ ಕುಮಾರ್ ವೈದ್ಯ ತಮ್ಮ ಪ್ರಾಣವನ್ನು ಅರ್ಪಿಸಿದರು. ಆದರೆ ಬಿಜೆಪಿ ಆ ವಿಷಯವನ್ನು ಮತ್ತೆ ತರಲು ಮತ್ತು ಪಂಜಾಬ್‌ನಲ್ಲಿ ರಾಜಕೀಯ ಮಾಡಲು ಬಯಸಿದೆ. ಈ ಕಿಡಿಯನ್ನು ಹೊತ್ತಿಸಿದರೆ ಅದು ದೇಶಕ್ಕೆ ಹಾನಿಕಾರಕವಾಗಿದೆ, ”ಎಂದು ಸಾಮ್ನಾ"ಸಂಪಾದಕೀಯ ಉಲ್ಲೇಖಿಸಿದೆ.

SCROLL FOR NEXT