ದೇಶ

ಅಯೋಧ್ಯೆ ದೇವಾಲಯ ಟ್ರಸ್ಟ್ ಗೆ ಈ ವರೆಗೂ 100 ಕೋಟಿ ದೇಣಿಗೆ: ಅ.17 ಕ್ಕೆ ನಿರ್ಮಾಣ ಪ್ರಾರಂಭ

Srinivas Rao BV

 ಅಯೋಧ್ಯೆ: ಅಯೋಧ್ಯೆ ದೇವಾಲಯ ಟ್ರಸ್ಟ್ ಗೆ ಈ ವರೆಗೂ 100 ಕೋಟಿ ದೇಣಿಗೆ ಹರಿದುಬಂದಿದೆ.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಈ ಬಗ್ಗೆ ಮಾಹಿತಿ ನೀಡಿದ್ದು ಅ.17 ರಿಂದ ಅಂದರೆ ನವರಾತ್ರಿಯ ಮೊದಲನೇ ದಿನದಿಂದ ಮಂದಿರ ನಿರ್ಮಾಣ ಕಾಮಗಾರಿ ಫೌಂಡೇಶನ್ ಪಿಲ್ಲರ್ ಗಳ ನಿರ್ಮಾಣದ ಮೂಲಕ ಪ್ರಾರಂಭವಾಗಲಿದೆ.  

ಕೇಂದ್ರ ಸರ್ಕಾರ ರಾಮಜನ್ಮಭೂಮಿ ಟ್ರಸ್ಟ್ ನ್ನು ಆದಾಯ ತೆರಿಗೆ ಕಾಯ್ದೆಯ 80ಜಿ ಅಡಿಯಲ್ಲಿ ಗುರುತಿಸಿದೆ.ಈ ಸೆಕ್ಷನ್ ಅಡಿಯಲ್ಲಿ‌ ದತ್ತಿ ಸಂಸ್ಥೆಗಳ ಪರಿಹಾರ ನಿಧಿಗಳಿಗೆ ನೀಡಿದ ದೇಣಿಗೆಗಳ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ. 

ಟ್ರಸ್ಟ್‌ಗೆ ನಿತ್ಯ ಗೋಪಾಲ್ ದಾಸ್ ಅವರು ಅಧ್ಯಕ್ಷರಾಗಿದ್ದರೆ, ನೃಪೇಂದ್ರ ಮಿಶ್ರಾ ಅವರನ್ನು ಅಯೋಧ್ಯೆಯ ಐತಿಹಾಸಿಕೆ ರಾಮ ಮಂದಿರದ ನಿರ್ಮಾಣ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
SCROLL FOR NEXT