ದೇಶ

ಇದೇ ಮೊದಲು: ಬಿಹಾರ ಚುನಾವಣೆಗೆ ಅಧಿಕಾರಿಯಾಗಿ ತೃತೀಯಲಿಂಗಿ ಮಹಿಳೆ ನೇಮಕ

Srinivas Rao BV

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಗೆ ಅಧಿಕಾರಿಯಾಗಿ ಇದೇ ಮೊದಲ ಬಾರಿಗೆ ಲಿಂಗ ಬದಲಾವಣೆಗೊಂಡ ಮಹಿಳೆಯೊಬ್ಬರನ್ನು ನೇಮಕ ಮಾಡಲಾಗಿದೆ. 

ಮೋನಿಕಾ ದಾಸ್ ನೇಮಕಗೊಂಡ ಅಧಿಕಾರಿಯಾಗಿದ್ದು, ಅ.28 ರಂದು ನಡೆಯಲಿರುವ ಚುನಾವಣೆಗೆ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. 32 ವರ್ಷದ  ಮೋನಿಕಾ ದಾಸ್ ಪಾಟ್ನಾ ವಿವಿಯಲ್ಲಿ ಚಿನ್ನದ ಪದಕ ಗೆದ್ದ ವಿದ್ಯಾರ್ಥಿಯಾಗಿದ್ದಾರೆ. 2015 ರಿಂದ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಕೆಲಸ ಮಾಡಿದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಮೋನಿಕಾ ದಾಸ್

ಯಾವುದೇ ರಾಜ್ಯದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ತೃತೀಯ ಲಿಂಗಿ ಅಧಿಕಾರಿಯೊಬ್ಬರನ್ನು ನೇಮಕ ಮಾಡಿರುವ ಐತಿಹಾಸಿಕ ದಾಖಲೆ ಬಿಹಾರ ಹೊಂದಿದೆ.

2016 ರಲ್ಲಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ರಿಯಾ ಸರ್ಕಾರ್ ಎಂಬ ಲಿಂಗಪರಿವರ್ತನೆಗೊಂಡ ಮಹಿಳೆಯನ್ನು ಪೊಲೀಂಗ್ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. 

ಮೋನಿಕಾ ದಾಸ್ ಅವರಿಗೆ ಚುನಾವಣೆಗೆ ಸಂಬಂಧಿಸಿದ ಎಲ್ಲಾ ತರಬೇತಿಗಳನ್ನು ನೀಡಲಾಗುವುದು ಎಂದು ಬಿಹಾರದ ಚುನಾವಣಾ ಆಯುಕ್ತ ಹೆಚ್ ಆರ್ ಶ್ರೀನಿವಾಸ ತಿಳಿಸಿದ್ದಾರೆ.

ಬಿಹಾರದಲ್ಲಿ ಲಿಂಗಪರಿವರ್ತನೆಗೊಂಡ 2,344 ಮಂದಿ ಮತದಾನಕ್ಕೆ ಅರ್ಹರಾಗಿದ್ದಾರೆ. ರಾಷ್ಟ್ರೀಯ ತೃತೀಯಲಿಂಗಿಗಳ ಪರಿಷತ್ ಮೋನಿಕಾ ದಾಸ್ ಅವರ ನೇಕಮದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ತಮ್ಮ ಸಮುದಾಯಕ್ಕೆ ಹೆಮ್ಮೆಯ ಸಂಗತಿ ಎಂದು ಹೇಳಿದೆ.

SCROLL FOR NEXT