ದೇಶ

ಬಡ್ಡಿ ದರ ನಿರ್ಧರಿಸುವ ಎಂಪಿಸಿ ಸಮಿತಿಗೆ ಅಶೀಮಾ ಗೋಯಲ್, ಶಶಾಂಕ್ ಭಿಡೆ, ಜಯಂತ್ ವರ್ಮಾ ನೇಮಕ 

Srinivas Rao BV

ನವದೆಹಲಿ: ಬಡ್ಡಿ ದರ ನಿರ್ಧರಿಸುವ ಮಹತ್ವದ ಸಮಿತಿಗೆ ಕೇಂದ್ರ ಸರ್ಕಾರ ಅಶೀಮಾ ಗೋಯಲ್, ಶಶಾಂಕ್ ಭಿಡೆ ಜಯಂತ್ ವರ್ಮಾ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ. 

ಅ.06 ರಂದು ಆದೇಶ ನೀಡಲಾಗಿದ್ದು ಅ.2024 ರ ಅವಧಿವರೆಗೆ  ನೇಮಕ ಮಾಡಲಾಗಿದೆ. ಈ ಹಿಂದೆ ಸಮಿತಿಯಲ್ಲಿದ್ದ ಚೇತನ್ ಘಟೆ, ಪಮಿ ದುವಾ, ರವೀಂದ್ರ ಧೋಲಾಕಿಯಾ ಅವರ ಅವಧಿ ಸೆ.22, 2020 ಕ್ಕೆ ಕೊನೆಗೊಂಡಿತ್ತು.

ಹೊಸದಾಗಿ ನೇಮಕಗೊಂಡಿರುವ ಸದಸ್ಯರು ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಅವರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.

ಅಶಿಮಾ ಗೋಯಲ್: ಪ್ರಧಾನ ಮಂತ್ರಿಗಳ ಆರ್ಥಿಕ ಸಹಲಾ ತಂಡದಲ್ಲಿ ಸದಸ್ಯರಾಗಿದ್ದ ಅಶೀಮಾ ಗೋಯಲ್, ಮುಂಬೈ ನ ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ರಿಸರ್ಚ್ ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.

ಶಶಾಂಕ್ ಭಿಡೆ: ದೆಹಲಿಯ ಅನ್ವಯಿಕ ಆರ್ಥಿಕ ಸಂಶೋಧನೆ (Applied Economic Research ) ನಲ್ಲಿ ಹಿರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜಯಂತ್ ಆರ್ ವರ್ಮ: ಐಐಎಂ ಅಹ್ಮದಾಬಾದ್ ನಲ್ಲಿ ಫೈನಾನ್ಸ್ ಹಾಗೂ ಅಕೌಂಟಿಂಗ್ ವಿಭಾಗದ ಪ್ರೊಫೆಸರ್ ಆಗಿದ್ದಾರೆ. 

SCROLL FOR NEXT