ದೇಶ

ಮಹದಾಯಿ ವಿವಾದ: ಕರ್ನಾಟಕದ ವಿರುದ್ಧ ಗೋವಾದಿಂದ ಸುಪ್ರೀಂ ಕೋರ್ಟ್ ಗೆ ನ್ಯಾಯಾಂಗ ನಿಂದನೆ ಅರ್ಜಿ

Raghavendra Adiga

ಪಣಜಿ: ಕರ್ನಾಟಕವು ಮಹದಾಯಿ ನದಿ ನೀರನ್ನು ಅಕ್ರಮವಾಗಿ ತಿರುಗಿಸಿಕೊಳ್ಳುತ್ತಿದೆ ಎಂದು ಆರೋಪದ ಮೇಲೆ ಗೋವಾ ಸರ್ಕಾರ ಈ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಮಂಗಳವಾರ ಹೇಳಿದ್ದಾರೆ.

ಗೋವಾದ ಜೀವನಾಡಿಯೆಂದು ಪರಿಗಣಿಸಲ್ಪಟ್ಟ ಮಹದಾಯಿ ನದಿಯ ನೀರನ್ನು ಹಂಚಿಕೊಳ್ಳುವ ವಿವಾದ ಎರಡೂರಾಜ್ಯಗಳ ನಡುವೆ ಸಾಕಷ್ಟು ದೊಡ್ಡ ವ್ಯಾಜ್ಯಕ್ಕೆ ಕಾರಣವಾಗಿದೆ.

ಅನುಮತಿಯಿಲ್ಲದೆ ನದಿ ನೀರನ್ನು ಬೇರೆಡೆಗೆ ತಿರುಗಿಸಲು ಕರ್ನಾಟಕ ಕಾಮಗಾರಿಗಳನ್ನು ಕೈಗೊಂಡಿದೆ ಎಂದು ಗೋವಾ ಆರೋಪಿಸಿದೆ.

ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಮಹದಾಯಿ ದಿ ನೀರನ್ನು ಹಂಚುವ ಕುರಿತು 2018 ರಲ್ಲಿ ಅಂತರ ರಾಜ್ಯ ಜಲ ವಿವಾದ ನ್ಯಾಯಮಂಡಳಿ ತನ್ನ ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ಮೂರು ರಾಜ್ಯಗಳೂ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು.

ಸೋಮವಾರ ಈ ಸಂಬಂಧ ಗೋವಾ ಸಿಎಂಸಾವಂತ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗೋವಾ ಮತ್ತು ಇತರರ ವಿರೋಧದ ಹೊರತಾಗಿಯೂ  ಕರ್ನಾಟಕವು ನೀರನ್ನು ಬೇರೆಡೆಗೆ ತಿರುಗಿಸಿದೆ ಎಂದು ಸುಪ್ರೀಂ ಕೋರ್ಟ್ ನಲ್ಲಿ ವಿಶೇಷ ದಾವೆ ಹೂಡಲಾಗಿದೆ ಎಂದಿದ್ದರು.  ಮಂಗಳವಾರ ಈ ಸಂಬಂಧ ತಮ್ಮ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

"ನಾವು ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು  ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದೇವೆ. ಕರ್ನಾಟಕ ನದಿ ನೀರನ್ನು ತಿರುಗಿಸಿದ್ದಕ್ಕೆ ವಿಡಿಯೋ ಸಾಕ್ಷ್ಯಗಳು ಸೇರಿದಂತೆ ಅನೇಕ ದಾಖಲೆಗಳನ್ನು ಕೊಡಲಾಗಿದೆ" ಎಂದು ಅವರು ಹೇಳಿದ್ದಾರೆ. ಏತನ್ಮಧ್ಯೆ, ಮಹಾದಾಯಿ ನೀರು ತಿರುಗಿಸುವ ವಿಷಯದಲ್ಲಿ ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿರುವ ತನ್ನದೇ ನಾಯಕರನ್ನು ವಜಾಗೊಳಿಸಬೇಕೆಂದು ಗೋವಾ ಶಿವಸೇನೆ ಘಟಕ ಹೇಳಿದೆ.

SCROLL FOR NEXT