ದೇಶ

ಸಿರ್ಸಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ತೆರವು, ಯೋಗೇಂದ್ರ ಯಾದವ್ ಸೇರಿ 100 ಮಂದಿ ಪೊಲೀಸ್ ವಶಕ್ಕೆ

Lingaraj Badiger

ಚಂಡೀಗಢ: ಕೇಂದ್ರದ ಹೊಸ ಕೃಷಿ ಕಾಯಿದೆ ವಿರೋಧಿಸಿ ಹರಿಯಾಣದ ಸಿರ್ಸಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ತೆರವುಗೊಳಿಸಿದ್ದು, ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಮತ್ತು ಸುಮಾರು 100 ರೈತರನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ.

ರಸ್ತೆಯಲ್ಲಿ ಧರಣಿ ನಡೆಸುತ್ತಿದ್ದ ಯೇಗೇಂದ್ರ ಯಾದವ್ ಹಾಗೂ ಹರಿಯಾಣ ಕಿಸಾನ್ ಮಂಚ್ ಮುಖ್ಯಸ್ಥ ಪ್ರಹ್ಲಾದ್ ಸಿಂಗ್ ಸೇರಿದಂತೆ ಹಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸಿರ್ಸಾ ಡಿಎಸ್ ಪಿ ಕುಲದೀಪ್ ಸಿಂಗ್ ಹೇಳಿದ್ದಾರೆ.

ರೈತರು ಸಿರ್ಸಾದ ಜನನಿಬಿಡ ಹೆದ್ದಾರಿಯಲ್ಲಿ ಧರಣಿ ನಡೆಸುತ್ತಿದ್ದರು. ಅಲ್ಲಿ ಪ್ರತಿಭಟನೆ ನಡೆಸಲು ಅವರಿಗೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

"ರೈತರು ದಸರಾ ಮೈದಾನದಲ್ಲಿ ಧರಣಿ ನಡೆಸಲು ಅನುಮತಿ ನೀಡಲಾಗಿತ್ತು ಮತ್ತು ನಾವು ಅವರನ್ನು ಅಲ್ಲಿಗೆ ಹೋಗುವಂತೆ ಕೇಳಿಕೊಂಡೆವು. ಅಲ್ಲದೆ ಜಿಲ್ಲಾಧಿಕಾರಿ ಕಚೇರಿಯ ಬಳಿಯಿರುವ ಮತ್ತೊಂದು ಸ್ಥಳದಲ್ಲಿ ಧರಣಿ ನಡೆಸಲು ನಾವು ಅವಕಾಶ ನೀಡಿದರೂ ಅವರು ಹೋಗಲಿಲ್ಲ. ಹೀಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಡಿಎಸ್ ಪಿ ಸಮರ್ಥಿಸಿಕೊಂಡಿದ್ದಾರೆ.

SCROLL FOR NEXT