ದೇಶ

ಹರಿಯಾಣ: ರೈತರ ಪರ ಬಿಜೆಪಿ ಶಾಸಕನಿಂದ ಧರಣಿ

Lingaraj Badiger

ಚಂಡೀಗಢ: ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿಯ ಶಾಸಕರೊಬ್ಬರು ಬುಧವಾರ ರಾಜ್ಯ ವಿಧಾನಸಭೆ ಕಟ್ಟಡದ ಮುಂದೆ ರೈತರ ಪರವಾಗಿ ಸಾಂಕೇತಿಕ ಧರಣಿ ನಡೆಸಿದರು.

ಸರ್ಕಾರದ ಹಿರಿಯ ಅಧಿಕಾರಿಯೊಬ್ಬರಿಂದಾಗಿ ಮಂಡಿಯಲ್ಲಿ ಭತ್ತ ಖರೀದಿ ವೇಳೆ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕ ಅಸೀಮ್ ಗೋಯೆಲ್ ಅವರು ಧರಣಿ ನಡೆಸಿದರು.

ಅಂಬಾಲಾ ನಗರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಗೋಯೆಲ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ) ಪಿ ಕೆ ದಾಸ್ ಅವರನ್ನು ಗುರಿಯಾಗಿಸಿಕೊಂಡು ಪ್ರತಿಭಟನೆ ನಡೆಸಿದರು.

ಭತ್ತ ಖರೀದಿ ವಿಳಂಬದಿಂದಾಗಿ ರೈತರು, ಕಾರ್ಮಿಕರು ಮತ್ತು ವ್ಯಾಪಾರಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಗೋಯೆಲ್ ಸುದ್ದಿಗಾರರಿಗೆ ತಿಳಿಸಿದರು.

ಬಿಜೆಪಿ ಶಾಸಕರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಪಿಕೆ ದಾಸ್ ಅವರು, ರಾಜಕೀಯ ಮುಖಂಡರು ಏನು ಹೇಳುತ್ತಿದ್ದಾರೆಂಬುದರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ, ಆದರೆ ಭತ್ತದ ಖರೀದಿ ಸುಗಮವಾಗಿ ನಡೆಯುತ್ತಿದೆ ಎಂದು ಹೇಳಿದರು.

SCROLL FOR NEXT